Home ಟಾಪ್ ಸುದ್ದಿಗಳು ನಾಳಿನ ಜೆಡಿಎಸ್‌ ಸಭೆಗೆ ಭಾಗವಹಿಸುವುದಿಲ್ಲ: ಶಾಸಕ ಜಿ. ಟಿ. ದೇವೇಗೌಡ

ನಾಳಿನ ಜೆಡಿಎಸ್‌ ಸಭೆಗೆ ಭಾಗವಹಿಸುವುದಿಲ್ಲ: ಶಾಸಕ ಜಿ. ಟಿ. ದೇವೇಗೌಡ

ಮೈಸೂರು: ಭಾನುವಾರದಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಜೆಡಿಎಸ್​ ಪಕ್ಷ ಸಂಘಟನಾ ಸಭೆಯಿಂದ ದೂರ ಉಳಿಯಲು ನಿರ್ಧರಿಸಿದ್ದು, ಕ್ಷೇತ್ರದ ಕೆಲಸದಿಂದ ಸಭೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಜೆಡಿಎಸ್​ ಶಾಸಕ ಜಿಟಿ ದೇವೇಗೌಡ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ನನಗೆ ಯಾರ ಮೇಲೂ ಯಾವುದೇ ಕೋಪ, ಬೇಸರ ಇಲ್ಲ. ತಾಳ್ಮೆಯಿಂದ ಇದ್ದೇನೆ. ನನಗೆ 75 ವರ್ಷ ವಯಸ್ಸಾಗಿದ್ದು, ನನಗೆ ವಯಸ್ಸಾದ ಕಾರಣ ಓಡಾಟ ಮಾಡಲು ಕಷ್ಟ ಆಗುತ್ತಿದೆ. ಆ ಹಿನ್ನೆಲೆಯಲ್ಲಿ ಹಾಗೂ ಆರೋಗ್ಯ ಸರಿಯಿಲ್ಲದ ಕಾರಣ ನಾಳಿನ ಸಭೆಗೆ ಹೋಗುತ್ತಿಲ್ಲ. ಇದೇ ವೇಳೆ ಮೈಸೂರು ದಿನೆ ದಿನೇ ಬೃಹದಾಕಾರವಾಗಿ ಬೆಳೆಯುತ್ತಿದ್ದು, ಬೃಹತ್‌ ಮೈಸೂರು ಮಹಾನಗರ ಪಾಲಿಕೆ ಮಾಡಬೇಕೆಂದು ಮನವಿಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಪಕ್ಷದ ರಾಜ್ಯಧ್ಯಕ್ಷರ ವಿಚಾರದಲ್ಲಿ ಹೆಚ್. ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ. ನನ್ನ ಮಗ ಜಿ. ಟಿ. ಹರೀಶ್‌ ಗೌಡ ಹಾಗೂ ನಿಖಿಲ್‌ ಕುಮಾರಸ್ವಾಮಿ ಒಳ್ಳೆಯ ಸ್ನೇಹಿತರು. ಹಾಗಾಗಿ ನಿಖಿಲ್‌ ರಾಜ್ಯಾ‍ಧ್ಯಕ್ಷರು ಆಗಲಿ ಎಂದು ನನ್ನ ಮಗ ಶಾಸಕ ಜಿ. ಟಿ. ಹರೀಶ್‌ ಗೌಡ ಹೇಳಿರುವುದರಲ್ಲಿ ತಪ್ಪಿಲ್ಲ ಎಂದು ಜಿಟಿಡಿ ಸಮರ್ಥಿಸಿಕೊಂಡರು.

Join Whatsapp
Exit mobile version