Home Uncategorized 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಸುಳಿವು ನೀಡಿದ ‘ಡೊನಾಲ್ಡ್‌ ಟ್ರಂಪ್‌’

2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಸುಳಿವು ನೀಡಿದ ‘ಡೊನಾಲ್ಡ್‌ ಟ್ರಂಪ್‌’

ಡೇಟನ್‌: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.


ಒಹಿಯೋದಲ್ಲಿ ನ‌ಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್‌, ನವೆಂಬರ್‌ 15 ರಂದು ಫ್ಲೋರಿಡಾದ ಪಾಮ್‌ ಬೀಚ್‌ನಲ್ಲಿರುವ ಮಾರ್‌–ಅ–ಲೋಗೋದಲ್ಲಿ ‘ದೊಡ್ದ ಘೋಷಣೆ’ಯೊಂದನ್ನು ಮಾಡಲಿದ್ದೇನೆ ಎಂದು ಹೇಳಿದರು. ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡುತ್ತಿದ್ದಂತೆ ಟ್ರಂಪ್‌ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮಟ್ಟಿದೆ.


2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಬಳಿಕ ಚುನಾವಣೆಯಲ್ಲಿ ಅಕ್ರಮ ಉಂಟಾಗಿದೆ ಎಂದು ತಕರಾರು ಎತ್ತಿದ್ದ ಟ್ರಂಪ್‌, ತಾನು ಈ ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರು.

Join Whatsapp
Exit mobile version