Home ಟಾಪ್ ಸುದ್ದಿಗಳು ನಿರ್ಮಲಾನಂದ ಸ್ವಾಮಿಯ ಹೆಗಲಿಗೆ ಕೈ ಹಾಕಿದ ಅಶೋಕ್: ಸ್ವಾಮಿಗಳೆಂದರೆ ಅಷ್ಟೊಂದು ಸದರವೇ ಎಂದ ಕಾಂಗ್ರೆಸ್

ನಿರ್ಮಲಾನಂದ ಸ್ವಾಮಿಯ ಹೆಗಲಿಗೆ ಕೈ ಹಾಕಿದ ಅಶೋಕ್: ಸ್ವಾಮಿಗಳೆಂದರೆ ಅಷ್ಟೊಂದು ಸದರವೇ ಎಂದ ಕಾಂಗ್ರೆಸ್

ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮಿಯ ಹೆಗಲ ಮೇಲೆ ಕೈ ಹಾಕಿ ಫೋಟೋಗೆ ಫೋಸ್ ನೀಡಿದ್ದು ಚರ್ಚೆಗೆ ಕಾರಣವಾಗಿದೆ. ಮೋದಿ ಹೆಗಲಿಗೆ ಕೈ ಹಾಕುವ ಧೈರ್ಯವಿದೆಯೇ ಎಂದು ಕಾಂಗ್ರೆಸ್ ಸವಾಲು ಹಾಕಿದೆ.


ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಸ್ವಾಮಿಜಿಗಳಿಗೆ ಅವರದ್ದೇ ಆದ ಗೌರವವಿರುತ್ತದೆ. ಘನತೆ ಇರುತ್ತದೆ. ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳು ಆರ್.ಅಶೋಕ್ ಅವರಿಗೆ ಸದರ ಎನಿಸಿದ್ದಾರೆಯೇ? ಇದೇ ರೀತಿ ಮೋದಿ ಹೆಗಲಿಗೆ ಕೈ ಹಾಕುವ ಧೈರ್ಯವಿದೆಯೇ? ಧರ್ಮ, ಸಂಸ್ಕೃತಿಯ ಬಗ್ಗೆ ಮಾತಾಡುವ ಬಿಜೆಪಿ ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯದ ಮುಖ್ಯಮಂತ್ರಿ ಫೋಟೋ ತೆಗೆಸಿಕೊಳ್ಳಲೂ ಹರಸಾಹಸಪಡಬೇಕೇ? ಪ್ರಧಾನಿ ಪಕ್ಕ ಸ್ವತಂತ್ರವಾಗಿ ನಿಲ್ಲಲೂ ಸಿಎಂ ಬೊಮ್ಮಾಯಿ ಅವರಿಗೆ ಸಾಧ್ಯವಾಗುತ್ತಿಲ್ಲ ಎಂದರೆ ಸಿಎಂ ಹುದ್ದೆಗೆ ಆಗುತ್ತಿರುವ ಅವಮಾನವಿದು. ಜಗ್ಗೇಶ್ ಅವರ ಹಿಂದೆ ನಿಂತು ಅವರನ್ನು ತಳ್ಳಿಕೊಂಡು ಮುಖ ತೋರಿಸುವ ಪಪ್ಪೆಟ್ ಸಿಎಂ ಅವರ ಸ್ಥಿತಿ ಶೋಚನೀಯವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

Join Whatsapp
Exit mobile version