Home ಟಾಪ್ ಸುದ್ದಿಗಳು ಪ್ರವಾದಿ ಬಗ್ಗೆ ಮಾತನಾಡಿಲ್ಲ, ಮಾತಿನ ವೇಗದಲ್ಲಿ ತಪ್ಪಾಗಿದೆ: ಯತ್ನಾಳ್ ಸ್ಪಷ್ಟನೆ

ಪ್ರವಾದಿ ಬಗ್ಗೆ ಮಾತನಾಡಿಲ್ಲ, ಮಾತಿನ ವೇಗದಲ್ಲಿ ತಪ್ಪಾಗಿದೆ: ಯತ್ನಾಳ್ ಸ್ಪಷ್ಟನೆ

0

ಬೆಂಗಳೂರು: ನಾನು ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಮಾತನಾಡಿಲ್ಲ. ಮಹಮ್ಮದ್ ಅಲಿ ಜಿನ್ನಾ ಎನ್ನಲು ಹೋಗಿ ಮಾತಿನ ವೇಗದಲ್ಲಿ ತಪ್ಪಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರು ಸೋಮವಾರ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾತಿನ ವೇಗದಲ್ಲಿ ತಪ್ಪಾಗಿದೆ. ನಾನು ಜಿನ್ನಾ ಅವರನ್ನು ಉಲ್ಲೇಖಿಸಲು ಬಯಸಿದ್ದೆ. ಆದರೆ, ಪ್ರವಾದಿ ಮುಹಮ್ಮದ್ ಅವರ ಹೆಸರು ಬಂದು ಬಿಟ್ಟಿತು. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ನನ್ನ ಮಾತುಗಳನ್ನು ತಪ್ಪಾಗಿ ನಿರೂಪಿಸಿದೆ. ಇದು ಕೋಮು ಉದ್ವಿಗ್ನತೆಯನ್ನು ಹುಟ್ಟುಹಾಕುವ ಪ್ರಯತ್ನ. ವಿಜಯಪುರದಲ್ಲಿ ಗೂಂಡಾಗಿರಿ, ಹಫ್ತಾ ವಸೂಲಿ ಮಾಡಲು ಆಗದೇ ಹತಾಶರಾಗಿರುವ ಕಾಂಗ್ರೆಸಿಗರು ಪೈಗಂಬರ್‌ಗೆ ನೆಪ ಮಾಡಿಕೊಂಡು, ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಮತ್ತೊಂದು ಧರ್ಮವನ್ನು ಹೀಯಾಳಿಸುವ ಸಂಸ್ಕೃತಿ ಇಲ್ಲ. ನಮ್ಮ ಗುರು, ಹಿರಿಯರು ಕಲಿಸಿಲ್ಲ ಎಂದು ಹೇಳಿದರು.

ನನ್ನನ್ನು ಮುಗಿಸುವುದಾಗಿ ಬೆದರಿಕೆ ಒಡ್ಡಿರುವ ಆಡಿಯೋ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ, ಇದರ ಹಿಂದೆ ಯಾರಿದ್ದಾರೆ ಎನ್ನುವುದು ಶೀಘ್ರ ಗೊತ್ತಾಗಲಿದೆ. ನನ್ನನ್ನು ಮುಗಿಸಲು ಯಾರಿಗೂ ಆಗಲ್ಲ, ಇಡೀ ಕರ್ನಾಟಕದ ಹಿಂದೂಗಳು ನನ್ನ ಜೊತೆ ಇದ್ದಾರೆ. ನನ್ನನ್ನು ಮುಗಿಸಲು ಹೋದರೆ ರಾಜ್ಯದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ತಿಳಿಸಿದರು.

ಬಿಜೆಪಿಯ ಜನಕ್ರೋಶ ಯಾತ್ರೆ ಕುರಿತು ಮಾತನಾಡಿ, ಕಾಂಗ್ರೆಸ್ ಸರ್ಕಾರ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ. ಗ್ಯಾಸ್ ಮತ್ತು ಪೆಟ್ರೋಲ್ ಬೆಲೆಗಳು ಹೆಚ್ಚಾಗಿದೆ ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version