Home ಟಾಪ್ ಸುದ್ದಿಗಳು ಪುನೀತ್ ಸಾವಿನಿಂದ ಲಾಭ ಪಡೆಯಲು ಮುಂದಾದ ಡೈಗ್ನಾಸ್ಟಿಕ್ಸ್ ಕೇಂದ್ರಗಳು | ಅಭಿಮಾನಿಗಳ ಆಕ್ರೋಶ

ಪುನೀತ್ ಸಾವಿನಿಂದ ಲಾಭ ಪಡೆಯಲು ಮುಂದಾದ ಡೈಗ್ನಾಸ್ಟಿಕ್ಸ್ ಕೇಂದ್ರಗಳು | ಅಭಿಮಾನಿಗಳ ಆಕ್ರೋಶ

► ಮೇಲ್ಭಾಗ ಪುನೀತ್ಗೆ ಶ್ರದ್ಧಾಂಜಲಿ , ಕೆಳಭಾಗ ರಿಯಾಯಿತಿ ದರದ ಜಾಹಿರಾತು!

ಬೆಂಗಳೂರು: ಹೃದಯ ಸ್ತಂಭನದಿಂದ ಅಕಾಲಿಕವಾಗಿ ನಮ್ಮಿಂದಗಲಿದ ಪುನೀತ್ ರಾಜ್ ಕುಮಾರ್ ರವರು ಇಲ್ಲ ಎನ್ನುವ ನೋವು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಇಡೀ ಕರುನಾಡು ಪುನೀತ್ ಅಗಲುವಿಕೆಯಿಂದ ಶೋಕ ಸಾಗರದಲ್ಲಿ ಮುಳುಗಿದೆ. ಆದರೆ ಈ ಮಧ್ಯೆ ಪುನೀತ್ ರಾಜ್ ಕುಮಾರ್ ಸಾವಿನಿಂದ ಕೆಲವೊಂದು ಡೈಗ್ನಾಸ್ಟಿಕ್ಸ್ ಕೇಂದ್ರಗಳು ಲಾಭ ಪಡೆಯಲು ಮುಂದಾಗಿದೆ. ಪುನೀತ್ ಚಿತ್ರವನ್ನು ಹಾಕಿ ಇಸಿಜಿ ಸಹಿತ ಇನ್ನಿತರ ತಪಾಸಣೆಗಳನ್ನು ಮಾಡಿಕೊಳ್ಳಿ ಎಂದು ಲಾಭ ಪಡೆಯಲು ಮುಂದಾಗಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪುನೀತ್ ಹೃದಯ ಸ್ತಂಭನದಿಂದ ಅಗಲಿದ್ದಾರೆ. ಪುನೀತ್ ನಿಧನದ ಬಳಿಕ ಜನರಿಗೆ ತಮ್ಮ ಹೃದಯದ ಬಗ್ಗೆ ಕಾಳಜಿ ತುಸು ಹೆಚ್ಚಾಗಿದೆ. ಜನರ ಕಾಳಜಿಯನ್ನೇ ವ್ಯವಹಾರ ರೀತಿಯಲ್ಲಿ ಕಂಡಿರುವ ಕೆಲವೊಂದು ಡೈಗ್ನಾಸ್ಟಿಕ್ಸ್ ಕೇಂದ್ರಗಳು ಕೇಂದ್ರಗಳು ಪುನೀತ್ ನಿಧನದ ಬಳಿಕ ಪ್ರಚಾರ ಪಡೆಯಲು ಮುಂದಾಗಿವೆ. ಬ್ಯಾನರ್ ಅಳವಡಿಸಿ ಮೇಲ್ಭಾಗ ಪುನೀತ್ಗೆ ಶ್ರದ್ಧಾಂಜಲಿ ಅರ್ಪಿಸಿ, ಕೆಳಭಾಗದಲ್ಲಿ ತಮ್ಮ ಡೈಗ್ನಾಸ್ಟಿಕ್ಸ್ ಕೇಂದ್ರದಲ್ಲಿ ಇಸಿಜಿ ಸೇರಿ ಹಲವು ಸೌಲಭ್ಯಗಳು ಇವೆ. ಇದಕ್ಕೆ ಆಫರ್ ಕೂಡ ಇದೆ ಎಂದು ಬರೆಯಲಾಗಿದೆ. ಪುನೀತ್ ಸಾವನ್ನು ಜಾಹೀರಾತಿಗೆ ಬಳಕೆ ಮಾಡಿಕೊಂಡು ಕೇಂದ್ರಗಳು ಲಾಭ ಮಾಡುವಲ್ಲಿ ನಿರತವಾಗಿದೆ ಎಂದು ಸಾಮಾಜಿಕ ಜಾಲಾಣದಲ್ಲಿ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ.

https://twitter.com/manjujb1/status/1455483884628365312?ref_src=twsrc%5Etfw%7Ctwcamp%5Etweetembed%7Ctwterm%5E1455483884628365312%7Ctwgr%5E%7Ctwcon%5Es1_&ref_url=https%3A%2F%2Ftv9kannada.com%2Fentertainment%2Fsandalwood%2Fpuneeth-rajkumar-death-news-misused-by-some-diagnostics-center-in-bangalore-rmd-291922.html

ಈ ಮೊದಲು ದೇಶದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದಾಗ ವೈದ್ಯರು ಸಾಬೂನು ಹಾಕಿ ಕೈ ತೊಳೆದುಕೊಳ್ಳುವಂತೆ ಸೂಚಿಸಿದ್ದರು. ಇದರ ಲಾಭ ಪಡೆಯೋಕೆ ಮುಂದಾಗಿದ್ದ ಸಾಬೂನು ಕಂಪೆನಿಗಳು, ತಮ್ಮ ಸೋಪ್ ಗಳಿಂದ ವೈರಸ್ ನಾಶವಾಗುತ್ತದೆ ಎನ್ನುವ ಜಾಹೀರಾತು ನೀಡಲು ಪ್ರಾರಂಭಿಸಿದ್ದವು. ಈ ಮೂಲಕ ತಮ್ಮ ಬ್ರ್ಯಾಂಡ್ಗಳಿಗೆ ಪ್ರಚಾರ ನೀಡಿದ್ದರು.

Join Whatsapp
Exit mobile version