Home ಕ್ರೀಡೆ ‘ಡಿಯರ್ ವಿರಾಟ್… ದ್ವೇಷಿಸುವವರನ್ನು ಕ್ಷಮಿಸಿ, ತಂಡವನ್ನು ರಕ್ಷಿಸಿ’

‘ಡಿಯರ್ ವಿರಾಟ್… ದ್ವೇಷಿಸುವವರನ್ನು ಕ್ಷಮಿಸಿ, ತಂಡವನ್ನು ರಕ್ಷಿಸಿ’

ನವದೆಹಲಿ: ತಂಡದ ಕಳಪೆ ಪ್ರದರ್ಶನ ಹಾಗೂ ಮುಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಾಂಧರಿಂದ ಟಾರ್ಗೆಟ್ ಆಗಿದ್ದ ವಿರಾಟ್ ಕೊಹ್ಲಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತಿದ್ದಾರೆ.

ಕೊಹ್ಲಿಗೆ ಬೆನ್ನಿಗೆ ನಿಂತಿರುವ ರಾಹುಲ್ ಗಾಂಧಿ, ನಿಮ್ಮನ್ನು ಟ್ರೋಲ್‌ ಮಾಡುತ್ತಿರುವವರನ್ನು ಕ್ಷಮಿಸಿಬಿಡಿ ಎಂದು ಸಲಹೆ ನೀಡಿದ್ದಾರೆ. ಟ್ವಿಟರ್’ನಲ್ಲಿ ರಾಹುಲ್ , ʼಪ್ರಿಯ ವಿರಾಟ್‌, ಈ ಜನರು ದ್ವೇಷವನ್ನು ತುಂಬಿಕೊಂಡಿದ್ದಾರೆ. ಏಕೆಂದರೆ ಯಾರೊಬ್ಬರೂ ಅವರಿಗೆ ಪ್ರೀತಿ ನೀಡಿಲ್ಲ. ಅವರನ್ನು ಕ್ಷಮಿಸಿ. ತಂಡವನ್ನು ರಕ್ಷಿಸಿʼ ಎಂದು ಟ್ವೀಟ್‌ ಮಾಡಿದ್ದಾರೆ. 

ರಾಹುಲ್ ಗಾಂಧಿ ಟ್ವೀಟ್ ಬಳಿಕ ‘ಡಿಯರ್ ವಿರಾಟ್’ ಟ್ವಿಟರ್’ನಲ್ಲಿ ಟ್ರೆಂಡಿಂಗ್’ನಲ್ಲಿದೆ. ಮತ್ತೊಂದೆಡೆ ಕ್ಯಾಪ್ಟನ್ ಕೊಹ್ಲಿ ಪುತ್ರಿಯನ್ನ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿಯ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದೆ. ನವೆಂಬರ್ 8ರ ಒಳಗಾಗಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ FIR, ಕೈಗೊಂಡಿರುವ ಕ್ರಮಗಳು ಹಾಗೂ ಆರೋಪಿಗಳ ವಿವರವನ್ನು ಮಹಿಳಾ ಆಯೋಗಕ್ಕೆ ನೀಡುವಂತೆ ದೆಹಲಿಯ ಸಹಾಯಕ ಕಮೀಷನರ್’ಗೆ ಸೂಚಿಸಲಾಗಿದೆ.

Join Whatsapp
Exit mobile version