Home ಕರಾವಳಿ ಮುಖ್ಯೋಪಾಧ್ಯಾಯರಿಲ್ಲದ ಸರಕಾರಿ ಶಾಲೆಗಳು ; ಕ್ಯಾಂಪಸ್ ಫ್ರಂಟ್ ವಿಟ್ಲ ನಿಯೋಗ ಬೋಳಿಯಾರು, ರಂತಡ್ಕ ಶಾಲೆಗಳಿಗೆ ಭೇಟಿ

ಮುಖ್ಯೋಪಾಧ್ಯಾಯರಿಲ್ಲದ ಸರಕಾರಿ ಶಾಲೆಗಳು ; ಕ್ಯಾಂಪಸ್ ಫ್ರಂಟ್ ವಿಟ್ಲ ನಿಯೋಗ ಬೋಳಿಯಾರು, ರಂತಡ್ಕ ಶಾಲೆಗಳಿಗೆ ಭೇಟಿ

ಮೆಲ್ಕಾರ್: ಬೋಳಿಯಾರ್ ಪ್ರಾಥಮಿಕ ಶಾಲೆಯಲ್ಲಿ 121 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ, ಆದರೆ ಈ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಲು ದೈಹಿಕ ಶಿಕ್ಷಕಿಯನ್ನು ಸೇರಿ ಕೇವಲ 4 ಶಿಕ್ಷಕರು ಹೊಂದಿದ್ದಾರೆ ಹಾಗೂ ವಿಶೇಷವಾಗಿ ಮುಖ್ಯೋಪಾಧ್ಯಾಯರು ಇಲ್ಲದೇ ಇರುವುದು ಮತ್ತು ರಂತಡ್ಕ ಪ್ರಾಥಮಿಕ ಶಾಲೆಯು 85 ಮಕ್ಕಳನ್ನು ಹೊಂದಿದ್ದು ಮುಖ್ಯೋಪಾಧ್ಯಾಯರು ಇಲ್ಲದೇ ಕೇವಲ ಮೂರು ಶಿಕ್ಷಕರನ್ನು ಹೊಂದಿರುವ ಮಾಹಿತಿಯನ್ನ ಪಡೆದ ಕ್ಯಾಂಪಸ್ ಫ್ರಂಟ್ ಜಿಲ್ಲಾ ಸಮಿತಿಯು ಶಾಲೆಗಳಿಗೆ ಭೇಟಿ ನೀಡಿತು.

ಕ್ಯಾಂಪಸ್ ಫ್ರಂಟ್ ವಿಟ್ಲ ಜಿಲ್ಲಾ ಸಮಿತಿಯು ಇದರ ಗಂಭೀರತೆಯನ್ನು ಮನಗಂಡು ಶಾಲೆಗಳಿಗೆ ಭೇಟಿ ನೀಡಿ, ಬೋಳಿಯರು ಶಾಲಾ ಸಮಿತಿಯ ಅಧ್ಯಕ್ಷರಲ್ಲಿ ಹಾಗೂ ಅಲ್ಲಿಯ ಶಿಕ್ಷರಲ್ಲಿ ಹಾಗೂ ರಂತಡ್ಕ ಶಾಲೆಯ ಶಿಕ್ಷಕರೊಂದಿಗೆ ಮಾತುಕತೆ ನಡೆಸಿ, ಮೆಲ್ಕಾರ್ ವಲಯದ ಬೋಳಿಯಾರ್ ಹಾಗೂ ರಂತಡ್ಕ ಪ್ರಾಥಮಿಕ ಶಾಲೆಗಳಿಗೆ ವಿದ್ಯಾಭ್ಯಾಸ ಕೊಡಲು ಬೇಕಾಗಿರುವ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರನ್ನು ನೇಮಿಸುವ ಕುರಿತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಭರವಸೆಯನ್ನು ನೀಡಿತು.

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ವಿಟ್ಲ ಅಧ್ಯಕ್ಷರಾದ ಫಯಾಜ್ ಕಲ್ಲಡ್ಕ, ಜಿಲ್ಲಾ ಸಮಿತಿ ಸದಸ್ಯ ಉಮರ್ ಮುಕ್ತಾರ್ ಮೆಲ್ಕಾರ್ ಏರಿಯಾ ಅಧ್ಯಕ್ಷರಾದ ಫಯಾಝ್ ಆಲಾಡಿ ಉಪಸ್ಥಿತರಿದ್ದರು.

Join Whatsapp
Exit mobile version