Home ಟಾಪ್ ಸುದ್ದಿಗಳು ನಾನು ಆರೆಸ್ಸೆಸ್ ಹೊಗಳಿದ್ದೆ ಎನ್ನುವುದು ಶುದ್ಧ ಸುಳ್ಳು; ಸುಳ್ಳಿಗೂ ಒಂದು ಮಿತಿ ಇರಬೇಕು : ದೇವೇಗೌಡ

ನಾನು ಆರೆಸ್ಸೆಸ್ ಹೊಗಳಿದ್ದೆ ಎನ್ನುವುದು ಶುದ್ಧ ಸುಳ್ಳು; ಸುಳ್ಳಿಗೂ ಒಂದು ಮಿತಿ ಇರಬೇಕು : ದೇವೇಗೌಡ

ಬೆಂಗಳೂರು: ನನಗೂ ಆರೆಸ್ಸೆಸ್ಸಿಗೂ ಏನು ಸಂಬಂಧ? ನಾನು ಆರೆಸ್ಸೆಸ್ ಹೊಗಳಿದ್ದೆ ಎನ್ನುವುದು ಶುದ್ಧ ಸುಳ್ಳು. ಸುಳ್ಳಿಗೂ ಒಂದು ಮಿತಿ ಇರಬೇಕು ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಕಿಡಿಕಾರಿದ್ದಾರೆ.


ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿ ಜೇಪಿ ಭವನದಲ್ಲಿ ಪತ್ರಕರ್ತರೊಡನೆ ಮಾತನಾಡಿದ ದೇವೇಗೌಡರು, ನನಗೆ ಆರೆಸ್ಸೆಸ್ ಬಗೆಗೆ ಏನೂ ಗೊತ್ತಿಲ್ಲ. ಗೊತ್ತಿರಬೇಕಾದ ಅಗತ್ಯವಿಲ್ಲ. ಹಿಂದೆ ಎಲ್. ಕೆ. ಅಡ್ವಾಣಿಯವರು ಬೆಂಗಳೂರಿಗೆ ಬಂದಿದ್ದಾಗ, ತುರ್ತು ಪರಿಸ್ಥಿತಿಯಲ್ಲಿ ಸೆರೆಮನೆಯಲ್ಲಿ ಇದ್ದವರು ಒಂದು ಸಭೆಗೆ ನಾನು ವ್ಯವಸ್ಥೆ ಮಾಡಿದ್ದೆ. ಆ ಸಭೆಯ ವಿಷಯ ಹೇಳಿ ದುರುಪಯೋಗ ಮಾಡಿಕೊಳ್ಳುವುದು ಅಯೋಗ್ಯತನ ಎಂದು ಅವರು ತಿಳಿಸಿದರು.


ಎಲ್ ಕೆ. ಅಡ್ವಾಣಿ ಬೆಂಗಳೂರಿಗೆ ಬಂದಾಗ ನನ್ನ ಅಧ್ಯಕ್ಷತೆಯಲ್ಲೇ ಸಮಾಲೋಚನಾ ಸಭೆ ನಡೆದಿತ್ತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಭೆ ನಡೆಸಲು ತಾವೇ ಅನುಮತಿ ನೀಡಿದ್ದೆ. ನನ್ನ ಅಧ್ಯಕ್ಷತೆಯಲ್ಲೇ ಈ ಸಭೆ ನಡೆದಿತ್ತು. ಸಭೆಯನ್ನು ಈಗ ದುರುಪಯೋಗಪಡಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ದೇವೇಗೌಡ ಹೇಳಿದರು.

Join Whatsapp
Exit mobile version