ನವದೆಹಲಿ: ದೇಶದ ಪ್ರತಿಯೊಬ್ಬ ನಾಗರಿಕನು ತಮಗೆ ಬೇಕಾದ ವಸ್ತ್ರವನ್ನು ಧರಿಸಲು ಸ್ವತಂತ್ರರು. ಹಿಜಾಬ್ ಗೆ ಅನುಮತಿ ನೀಡದಿದ್ದರೆ, ಸಿಖ್ಖರ ಪೇಟ, ಹಿಂದೂಗಳ ಹಣೆಯ ಮೇಲಿನ ಕುಂಕುಮ ಮತ್ತು ಕ್ರಿಶ್ಚಿಯನ್ನರ ಶಿಲುಬೆಗೆ ಯಾಕೆ ಅನುಮತಿ ನೀಡಲಾಗಿದೆ ಎಂದು ಸಂಸದ ಶಶಿ ತರೂರ್ ಟ್ವೀಟ್ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಕಾಲೇಜುಗಳು ಕೇಸರಿಕರಣವಾಗುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ತರಗತಿಯ ಒಳಗೆ ಓದಲು ಅವಕಾಶ ಮಾಡಿ ಕೊಡಿ. ವಸ್ತ್ರಧಾರಣೆಯ ನಿರ್ಧಾರ ಸಂತ್ರಸ್ತರು ನಿರ್ಧರಿಸಲಿ ಎಂದು ಅವರು ತಿಳಿಸಿದ್ದಾರೆ.
ಇಂದು ಕುಂದಾಪುರ ಸರ್ಕಾರಿ ಕಾಲೇಜಿನಲ್ಲಿ ಸ್ಕ್ರಾಫ್ ಹಾಕಿದ ವಿದ್ಯಾರ್ಥಿನಿಗಳನ್ನು ಪ್ರಾಂಶುಪಾಲರು ತಡೆದು ನಿಲ್ಲಿಸಿದ್ದರು. ಇದರ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ.