ಡೆಹ್ರಾಡೂನ್: ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಮುಸ್ಲಿಮರ ನರಮೇಧದ ದ್ವೇಷ ಭಾಷಣವನ್ನು ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
ಕೋಮುವಾದ ಮತ್ತು ದ್ವೇಷದ ಭಾಷಣ ಯಾರೇ ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು. ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ಭಾಷಣ ಮಾಡಿದವರೂ ಕೂಡಾ ಶಿಕ್ಷೆಗೆ ಅರ್ಹರು ಎಂದು ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ದ್ವೇಷದ ರಾಜಕಾರಣ ಭ್ರಷ್ಟಾಚಾರಕ್ಕೆ ಸಮ ಎಂದ ಅವರು, ಇಂತಹ ಕೋಮುವಾದವನ್ನು ಪೋಷಿಸುವ ಮತ್ತು ಪ್ರಚಾರ ಮಾಡುವುದರಿಂದ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಮುಖಂಡರು ದೂರ ನಿಲ್ಲಬೇಕು ಎಂದು ಕರೆ ನೀಡಿದ್ದಾರೆ.
ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್ ನಲ್ಲಿ ಹಿಂದುತ್ವವಾದಿಗಳು ಮುಸ್ಲಿಮರ ನರಮೇಧ ನಡೆಸಲು ಕರೆ ನೀಡಿದ್ದರು.
ಭಾರತ ಹಿಂದೂ ರಾಷ್ಟ್ರವಾಗಬೇಕಾದರೆ ಮುಸ್ಲಿಮರ ವಿರುದ್ಧ ಹೋರಾಡಿ ಅವರನ್ನು ಕೊಲ್ಲುತ್ತೇವೆ ಎಂದು ಪ್ರತಿಜ್ಞೆಗೈಯ್ಯುವಂತೆ ಹಿಂದೂ ಯುವ ವಾಹಿನಿಯ ಮುಖಂಡರು ಕರೆ ನೀಡಿದ್ದರು.