Home ಕರಾವಳಿ ಗ್ಯಾಸ್ ಸಿಲಿಂಡರ್ ವಿತರಣೆ: ಹೆಚ್ಚುವರಿ ಹಣ ನೀಡದಂತೆ ಸೂಚನೆ

ಗ್ಯಾಸ್ ಸಿಲಿಂಡರ್ ವಿತರಣೆ: ಹೆಚ್ಚುವರಿ ಹಣ ನೀಡದಂತೆ ಸೂಚನೆ

ಮಂಗಳೂರು: ಜಿಲ್ಲೆಯಲ್ಲಿ ಅಡುಗೆ ಅನಿಲ ವಿತರಕರು ಮನೆ ಮನೆಗೆ ಅಡುಗೆ ಅನಿಲ ಸಿಲಿಂಡರ್ ಗಳನ್ನು ಪೂರೈಕೆ ಮಾಡುವ ಸಂದರ್ಭದಲ್ಲಿ ನಿಗದಿ ಪಡಿಸಿದ ದರವನ್ನೇ ಗ್ರಾಹಕರು ನೀಡುವಂತೆ ಕೋರಲಾಗಿದೆ.

ಹೆಚ್ಚಿನ ದರ ವಸೂಲಿ ಮಾಡುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂರುಗಳು ಬಂದಿದ್ದು, ದಿ.ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ರೆಗ್ಯೂಲೇಷನ್ ಆಫ್ ಸಪ್ಲೈ ಅಂಡ್ ಡಿಸ್ಟ್ರಿಬ್ಯೂಷನ್) ಆರ್ಡರ್ 2000 ರನ್ವಯ ಸಂಬಂಧಪಟ್ಟ ಆಯಿಲ್ ಕಂಪೆನಿಗಳು ಡೋರ್ ಡೆಲಿವರಿ ಮೊಬಲಗನ್ನು ಆದೇಶದಲ್ಲಿ ನಿಗದಿಪಡಿಸಿದಂತೆ 5ಕಿ.ಮೀ. ಗಳ ವರೆಗೆ ಉಚಿತವಾಗಿ ಹಾಗೂ 5 ಕಿ.ಮೀ ನಂತರದ ಪ್ರತಿ ಕಿ.ಮೀ.ಗೆ 1.60ರೂ. ಪ್ರತಿ ಸಿಲಿಂಡರ್’ಗೆ ಪಡೆಯಬೇಕು.

ಒಂದು ವೇಳೆ ಅನಿಲ ವಿತರಕರು ಹೆಚ್ಚುವರಿ ಹಣ ವಸೂಲಿ ಮಾಡಿದ್ದಲ್ಲಿ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರು ಅಥವಾ ಟ್ರೋಲ್ ಫ್ರೀ ನಂ:1800-233-3555 ಗೆ ದೂರು ಸಲ್ಲಿಸಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Join Whatsapp
Exit mobile version