Home ಟಾಪ್ ಸುದ್ದಿಗಳು ದಲಿತ ಡೆಲಿವರಿ ಬಾಯ್ ತಂದ ಆಹಾರ ಪಡೆಯದೆ ಜಾತಿ ನಿಂದನೆ: ಪ್ರಕರಣ ದಾಖಲು

ದಲಿತ ಡೆಲಿವರಿ ಬಾಯ್ ತಂದ ಆಹಾರ ಪಡೆಯದೆ ಜಾತಿ ನಿಂದನೆ: ಪ್ರಕರಣ ದಾಖಲು

ಲಕ್ನೋ:  ಝೊಮ್ಯಾಟೋ ಡೆಲಿವರಿ ಬಾಯ್ ದಲಿತನಾಗಿದ್ದ ಕಾರಣಕ್ಕೆ ಆರ್ಡರ್ ಮಾಡಿದ್ದ ಆಹಾರವನ್ನು ಆತನಿಂದ ಪಡೆಯದೇ ಜಾತಿ ನಿಂದನೆ ಮಾಡಿದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ.

ದಲಿತನಾಗಿದ್ದ ಕಾರಣಕ್ಕೆ ಆರ್ಡರ್ ಮಾಡಿದ್ದ ಆಹಾರವನ್ನು ಆತನಿಂದ ಪಡೆಯದೇ ಜಾತಿ ನಿಂದನೆ ಮಾಡಿ ಮೂದಲಿಸಿದ್ದಾರೆ ಎಂದು ಝೊಮ್ಯಾಟೋ  ಡೆಲಿವರಿ ಬಾಯ್  ಸೋಮ್ ಕುಮಾರ್ ರಾವತ್ ನೀಡಿದ ದೂರು ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 ಸೋಮ್ ಕುಮಾರ್ ರಾವತ್ ಗ್ರಾಹಕರೊಬ್ಬರು ಆರ್ಡರ್ ಮಾಡಿದ ಆಹಾರವನ್ನು ಪಡೆದು ಸ್ಥಳಕ್ಕೆ ಹೋಗಿದ್ದಾರೆ. ಈ ವೇಳೆ, ಗ್ರಾಹಕ ಈತನ ಹೆಸರು ಮತ್ತು ಜಾತಿಯ ಬಗ್ಗೆ ಪ್ರಶ್ನಿಸಿದ್ದಾರೆ. ಸೋಮ್ ಕುಮಾರ್ ತಾನು ದಲಿತ ಜಾತಿಗೆ ಸೇರಿದವನು ಎಂದು ಪರಿಚಯಿಸಿಕೊಂಡಾಗ ಆ ಗ್ರಾಹಕ ಆತನನ್ನು ನಿಂದಿಸಿ, ಆಹಾರವನ್ನು ಪಡೆಯದೇ ಅವಮಾನ ಮಾಡಿದ್ದಾನೆ. ಅಲ್ಲದೇ, ಜಾತಿಯನ್ನು ಕೆಟ್ಟದಾಗಿ ನಿಂದಿಸಿ ಮೂದಲಿಸಿದ್ದಾನೆ. ಇದರಿಂದ ಅವಮಾನಿತನಾದ ಸೋಮ್ಕುಮಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

Join Whatsapp
Exit mobile version