Home ಟಾಪ್ ಸುದ್ದಿಗಳು ತಾಲಿಬಾನ್ ಭಾರತದಲ್ಲಿ ಇದ್ದಿದ್ದರೆ ಸಿದ್ದರಾಮಯ್ಯರ ದೇಹ ನೇತಾಡುತ್ತಿತ್ತು | ಸಿಟಿ ರವಿ

ತಾಲಿಬಾನ್ ಭಾರತದಲ್ಲಿ ಇದ್ದಿದ್ದರೆ ಸಿದ್ದರಾಮಯ್ಯರ ದೇಹ ನೇತಾಡುತ್ತಿತ್ತು | ಸಿಟಿ ರವಿ

ಬೆಂಗಳೂರು: ಆರ್ ಎಸ್ ಎಸ್ ಅನ್ನು ತಾಲಿಬಾನಿಗೆ ಹೋಲಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಒಂದು ವೇಳೆ ತಾಲಿಬಾನ್ ಭಾರತದಲ್ಲಿ ಇದ್ದಿದ್ದರೆ ಸಿದ್ದರಾಮಯ್ಯರ ಪಂಚೆ ಮಾತ್ರ ಅಲ್ಲ ದೇಹವೂ ನೇತಾಡುತ್ತಿತ್ತು ಎಂದಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಹಿಂದೆ ತಾಲಿಬಾನ್ ಹಾಗೂ ಆರ್ ಎಸ್ ಎಸ್ ಎರಡೂ ಒಂದೇ, ಇಬ್ಬರಿಗೂ ವ್ಯತ್ಯಾಸವಿಲ್ಲ ಎಂದು ವಾಗ್ದಾಳಿ ನಡೆಸಿದ್ದರು, ಈ ಕುರಿತು ಪ್ರತಿಕ್ರಿಯಿಸಿರುವ ಸಿಟಿ ರವಿ ತಾಲಿಬಾನ್ ಏನು, ಆರ್ ಎಸ್ ಎಸ್ ಏನು ಎಂಬುವುದನ್ನು ಅರ್ಥೈಸುವಷ್ಟು ಹೀನರಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ವಯಸ್ಸಾದಂತೆ ಸಿದ್ದರಾಮಯ್ಯ ಏನೇನೋ ಮಾತನಾಡುತ್ತಿದ್ದಾರೆ, ತಾಲಿಬಾನ್ ಭಾರತದಲ್ಲಿದ್ದರೆ ಸಿದ್ದರಾಮಯ್ಯ ಬದುಕಲು ಸಾಧ್ಯವಿತ್ತೇ, ಅವರ ಪಂಚೆ ಮಾತ್ರವಲ್ಲ ದೇಹವು ನೇತಾಡುತ್ತಿತ್ತು ಎಂದು ಹೇಳಿದ್ದಾರೆ.

ಆರ್ ಎಸ್ ಎಸ್ ಬಗ್ಗೆ ಕಾಂಗ್ರೆಸ್ಸಿಗರು ಟೀಕಿಸುವ ಮೊದಲು ಅವರದ್ದೇ ಪಕ್ಷದ ಡಾ. ಕೇಶವ ಬಲಿರಾಮ್ ಹೆಡಗೇವಾರ್ ರ ಇತಿಹಾಸ ಕಲಿಯಲಿ, ಅವರ ಚರಿತ್ರೆಯನ್ನು ಅಭ್ಯಸಿಸಲಿ ಎಂದೂ ಸಿಟಿ ರವಿ ಹೇಳಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಾ ಕೇಶವ ಬಲಿರಾಮ್ ಆರ್ ಎಸ್ ಎಸ್ ಸಂಸ್ಥಾಪಕರಾಗಿ ಗುರುತಿಸಿಕೊಂಡಿದ್ದರು.

Join Whatsapp
Exit mobile version