Home ಟಾಪ್ ಸುದ್ದಿಗಳು ಕೇರಳ ರಾಜ್ಯಪಾಲ – ಆರೆಸ್ಸೆಸ್ ಮುಖ್ಯಸ್ಥ ಭೇಟಿ: ಪ್ರಶ್ನಿಸಿದ ಸಿಪಿಐಎಂ

ಕೇರಳ ರಾಜ್ಯಪಾಲ – ಆರೆಸ್ಸೆಸ್ ಮುಖ್ಯಸ್ಥ ಭೇಟಿ: ಪ್ರಶ್ನಿಸಿದ ಸಿಪಿಐಎಂ

ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ತ್ರಿಶೂರಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿರುವ ನಡೆಯನ್ನು ಆಡಳಿತರೂಢ ಸಿಪಿಐಎಂ ಪ್ರಶ್ನಿಸಿದೆ.

ರಾಜ್ಯಪಾಲರು ಎಲ್ಲಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಸ್ಥಳೀಯ ಆರೆಸ್ಸೆಸ್ ಮುಖಂಡನ ಮನೆಗೆ ಭಾಗವತ್ ಅವರನ್ನು ಕರೆಸುವ ಮೂಲಕ ತಮ್ಮ ಸ್ಥಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಸಿಪಿಐಎಂ ನ ಹಿರಿಯ ನಾಯಕ ಎಂ.ವಿ ಜಯರಾಜನ್ ತಿಳಿಸಿದ್ದಾರೆ.

ಕೇರಳ ಸರ್ಕಾರ ಮತ್ತು ರಾಜ್ಯಪಾಲ ಆರಿಫ್ ಖಾನ್ ನಡುವಿನ ಜಂಟಿ ಕಾಳಗದ ಮಧ್ಯೆ ಜಯರಾಜನ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ರಾಜ್ಯಪಾಲ ಆರಿಫ್ ಖಾನ್ ಅವರು ಸಂಘಪರಿವಾರದ ಮುಖಂಡರಂತೆ ವರ್ತಿಸುತ್ತಿದ್ದಾರೆ ಎಂದು ಜಯರಾಜನ್ ಆರೋಪಿಸಿದ್ದಾರೆ.

ಕಳೆದ ರಾತ್ರಿ 8 ಗಂಟೆಗೆ ಆರಿಫ್ ಖಾನ್ ಅವರು ಭಾಗವತ್ ಅವರೊಂದಿಗೆ ಸಂಕ್ಷಿಪ್ತ ಸಭೆ ನಡೆಸಿದ್ದಾರೆ ಎಂದು ರಾಜ್ಯಪಾಲರ ಕಚೇರಿ ಮೂಲಗಳು ದೃಢಪಡಿಸಿವೆ.

Join Whatsapp
Exit mobile version