Home ಟಾಪ್ ಸುದ್ದಿಗಳು ಮದರಸಾ ಧ್ವಂಸಕ್ಕೆ ಕರೆ: ನರಸಿಂಹಾನಂದ ವಿರುದ್ಧ ಪ್ರಕರಣ ದಾಖಲು

ಮದರಸಾ ಧ್ವಂಸಕ್ಕೆ ಕರೆ: ನರಸಿಂಹಾನಂದ ವಿರುದ್ಧ ಪ್ರಕರಣ ದಾಖಲು

ಲಕ್ನೋ: ಅಲಿಘಡ್ ಮುಸ್ಲಿಮ್ ಯುನಿವರ್ಸಿಟಿ ಮತ್ತು ಉತ್ತರ ಪ್ರದೇಶದ ಮದರಸಾಗಳನ್ನು ಧ್ವಂಸಗೊಳಿಸುವಂತೆ ಸಂಘಪರಿವಾರ ಕಾರ್ಯಕರ್ತರಿಗೆ ಕರೆ ನೀಡಿದ ನರಸಿಂಹಾನಂದ ಸರಸ್ವತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರತಿಸಲವೂ ವಿವಾದಾತ್ಮಕ ಹೇಳಿಕೆಗಳ ಮೂಲಕ ಜನರನ್ನು ಪ್ರಚೋದಿಸಿ ಹಿಂಸಾಚಾರಕ್ಕೆ ಕರೆ ನೀಡುವ ನರಸಿಂಹಾನಂದ, ಸೆಪ್ಟೆಂಬರ್ 18 ರಂದು ಅಲಿಘಡ್’ನಲ್ಲಿ ನಡೆದ ಹಿಂದೂ ಮಹಾಸಭೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತರ ಪ್ರದೇಶ ಸರ್ಕಾರ ನಡೆಸುತ್ತಿರುವ ಮದರಸಾಗಳ ಸಮೀಕ್ಷೆಯು ಸ್ವಾಗತಾರ್ಹವಾಗಿದ್ದು, ಇನ್ನು ಮುಂದಕ್ಕೆ ಮದರಸಾದಂತಹ ಸಂಸ್ಥೆಗಳು ಅಸ್ತಿತ್ವದಲ್ಲಿರಬಾರದು. ಚೀನಾ ಮಾದರಿಯಲ್ಲಿ ಎಲ್ಲಾ ಮದರಸಾಗಳನ್ನು ಸ್ಫೋಟಿಸಬೇಕು. ಅಲ್ಲಿನ ವಿದ್ಯಾರ್ಥಿಗಳನ್ನು ವಿವಿಧ ಶಿಬಿರಗಳಿಗೆ ಕಳುಹಿಸಬೇಕು ಎಂದು ಹೇಳುವ ವೀಡಿಯೋ ವೈರಲ್ ಆಗುತ್ತಿದೆ.

ಅಲ್ಲದೆ ಇದೇ ಮಾದರಿಯಲ್ಲಿ ಅಲಿಘಡ್ ಯುನಿವರ್ಸಿಟಿಯನ್ನು ಧ್ವಂಸ ಮಾಡಬೇಕೆಂದು ಕರೆ ನೀಡಿದ ಅವರು, ವಿದ್ಯಾರ್ಥಿಗಳನ್ನು ಬಂಧಿಸಬೇಕು ಮತ್ತು ಅವರ ಮೆದುಳಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಹೇಳುತ್ತಿರುವುದು ವೈರಲ್ ವೀಡಿಯೋದಲ್ಲಿ ಸೆರೆಯಾಗಿದೆ.

Join Whatsapp
Exit mobile version