ಹಠಾತ್ ಸಾವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಣೆ
ಬೆಂಗಳೂರು: ಕೋವಿಡ್ ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ. ‘ಹಠಾತ್ ಸಾವನ್ನು ಇನ್ನು ಮುಂದೆ ಅಧಿಸೂಚಿತ ಕಾಯಿಲೆಯಾಗಿ ಪರಿಗಣಿಸಲಾಗುವುದು’ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹೃದಯಾಘಾತ ಕುರಿತು ಸಮೀಕ್ಷೆ ನಡೆಸಿದ ತಾಂತ್ರಿಕ ಸಲಹಾ ಸಮಿತಿಯಿಂದ ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಕೋವಿಸ್ ಲಸಿಕೆಯಿಂದ ಹೃದಯಾಘಾತ ಎನ್ನುವ ಆರೋಪವನ್ನು ಅಲ್ಲಗಳೆದಿದ್ದಾರೆ.
ಕೋವಿಡ್ ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ. ಮಧುಮೇಹ, ಕೊಬ್ಬು ಸೇರಿದಂತೆ ಅನೇಕ ಅಡ್ಡ ಪರಿಣಾಮಗಳು ಹೃದಯಾಘಾತಕ್ಕೆ ಕಾರಣ ಆಗಿವೆ. ರಕ್ತದೊತ್ತಡ, ಶುಗರ್, ದಪ್ಪ ಆಗಿರೋದು, ದೈಹಿಕ ಚಟುವಟಿಕೆ ಇಲ್ಲದೇ ಇರೋದು. ಹೃದಯಾಘಾತ ಹೆಚ್ಚಾಗೋದಕ್ಕೆ ಕಾರಣ ಆಗಿದೆ. ಜನರ ಜೀವನ ಶೈಲಿ ಕೂಡ ಹೃದಯಾಘಾತಕ್ಕೆ ಕಾರಣ ಆಗಿದೆ. ಕೊವಿಡ್ ಲಸಿಕೆಯಿಂದ ನೇರವಾಗಿ ಕಾರಣ ಅಲ್ಲ ಎಂದು ಹೇಳಿದ್ದಾರೆ.
ಕೊರೊನಾ ರೋಗದಿಂದ ಸ್ವಲ್ಪ ಮಟ್ಟಿಗೆ ಹೃದಯಾಘಾತ ಹೆಚ್ಚಾಗಿದೆ. ಕೊರೊನಾ ಬಂದ ಒಂದು ವರ್ಷದೊಳಗೆ ರಕ್ತನಾಳ ಬ್ಲಾಕೇಜ್ ಆಗುವ ಸಾಧ್ಯತೆ ಇದೆ. ಆದರೆ, ಮೂರು ವರ್ಷದ ನಂತರ ಅದರ ಪರಿಣಾಮ ಅಷ್ಟರ ಮಟ್ಟಿಗೆ ಇಲ್ಲ. ಹೃದಯಾಘಾತಕ್ಕೆ ಲಸಿಕೆ ಕಾರಣವಲ್ಲ. ಕೊರೊನಾ ಲಸಿಕೆಯಿಂದ ಜನರಿಗೆ ಅನುಕೂಲ ಆಗಿದೆ. ಆದರೆ, ಎಂಆರ್ಎನ್ಎ ವ್ಯಾಕ್ಸಿನ್ ಬಗ್ಗೆ ಸ್ವಲ್ಪ ಅನುಮಾನ ಇದೆ. ಈ ವ್ಯಾಕ್ಸಿನ್ ಅನ್ನು ನಮ್ಮ ದೇಶದಲ್ಲಿ ಯಾರು ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಹೃದಯಘಾತವನ್ನು ಸಡನ್ ಡೆತ್ ಅಧಿಸೂಚಿತ ಕಾಯಿಲೆ ಎಂದು ಘೋಷಣೆ ಮಾಡುತ್ತೇವೆ. ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಮಾಡುವುದು ಕಡ್ಡಾಯ. ಹೃದಯಾಘಾತದ ಬಗ್ಗೆ ಪ್ರತ್ಯೇಕ ಪಠ್ಯ ಅಳವಡಿಕೆ ಮಾಡಲಾಗುವುದು. ಶಿಕ್ಷಣ ಇಲಾಖೆ ಮುಂದಿನ ವರ್ಷದಿಂದ ಪಠ್ಯ ಅಳವಡಿಕೆ ಮಾಡುತ್ತೆ ಎಂದು ಹೇಳಿದರು.
