ಮುಂಬೈ: ‘ಅಪಾಯಕಾರಿ’ (ರಿಸ್ಕ್) ದೇಶಗಳು ಎಂದು ಪರಿಗಣಿಸಲಾಗಿರುವ ದೇಶಗಳಿಂದ ಆಗಮಿಸಿದ ಆರು ಮಂದಿ ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಬುಧವಾರ ತಿಳಿಸಿದೆ.
ದಕ್ಷಿಣ ಆಫ್ರಿಕಾ ಅಥವಾ ಇತರ ದೇಶಗಳಿಂದ ದೃಢೀಕೃತ ಒಮಿಕ್ರಾನ್ ಪ್ರಕರಣಗಳೊಂದಿಗೆ ಆಗಮಿಸಿದ ಎಲ್ಲಾ ಆರು ಮಂದಿ ಪ್ರಯಾಣಿಕರಲ್ಲಿ ರೋಗಲಕ್ಷಣರಹಿತ ಅಥವಾ ಸೌಮ್ಯ ರೋಗಲಕ್ಷಣ ಕಂಡುಬಂದಿದೆ. ಅವರ ಮಾದರಿಗಳನ್ನು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮುಂಬೈ ಕಾರ್ಪೊರೇಷನ್ , ಕಲ್ಯಾಣ್-ದೊಂಬಿವಲಿ ಕಾರ್ಪೊರೇಷನ್, ಮೀರಾ-ಭಯಂದರ್ ಕಾರ್ಪೊರೇಷನ್ ಮತ್ತು ಪುಣೆಯಲ್ಲಿ ಆರು ಮಂದಿ ಹಾಗೂ ನೈಜೀರಿಯಾದಿಂದ ಆಗಮಿಸಿದ ಇಬ್ಬರು ಪ್ರಯಾಣಿಕರು ಪಿಂಪ್ರಿ-ಚಿಂಚ್ವಾಡ್ ಕಾರ್ಪೊರೇಷನ್ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ.