Home ಟಾಪ್ ಸುದ್ದಿಗಳು ಇಂದಿನಿಂದ ಯಾವೆಲ್ಲಾ ವಸ್ತುಗಳು ದುಬಾರಿ ಗೊತ್ತಾ ?

ಇಂದಿನಿಂದ ಯಾವೆಲ್ಲಾ ವಸ್ತುಗಳು ದುಬಾರಿ ಗೊತ್ತಾ ?

ನವದೆಹಲಿ: ಡಿಸೆಂಬರ್ 1 ರಿಂದ ಬ್ಯಾಂಕಿಂಗ್, ಹಣಕಾಸು ಮತ್ತು ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವಾರು ನಿಯಮಗಳು ಬದಲಾಗುತ್ತಿವೆ. ಅಲ್ಲದೆ ದೈನಂದಿನ ವಸ್ತುಗಳು ದುಬಾರಿಯಾಗಿವೆ.
ಪ್ರತಿ ತಿಂಗಳಂತೆಯೇ ಈ ತಿಂಗಳು ಕೂಡ ತೈಲ ಕಂಪನಿಗಳು ಎಲ್ ಪಿಜಿ ಸಿಲಿಂಡರ್ ಗಳ ದರ ಪರಿಷ್ಕರಣೆ ಮಾಡಲಿವೆ. ಇಂದು ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಾಗಿದೆ.


ಬೆಂಗಳೂರಿನಲ್ಲಿ ಇಂದಿನಿಂದ ಆಟೋ ದರ ಏರಿಕೆಯಾಗಿದೆ. ಮೊದಲ 2 ಕಿ.ಮೀ.ಗೆ ವಿಧಿಸಲಾಗುವ ಕನಿಷ್ಠ ದರವನ್ನು 25 ರೂ.ನಿಂದ 30 ರೂ.ಗೆ ಏರಿಸಲಾಗಿದೆ. ಕನಿಷ್ಠ ದರದ ನಂತರದ ಪ್ರತಿ ಕಿ.ಮೀ.ಗೆ 15 ರೂಪಾಯಿ ದರ ನಿಗದಿ ಮಾಡಲಾಗಿದೆ.


ಕ್ರೆಡಿಟ್ ಕಾರ್ಡ್ ಪ್ರೊಸೆಸಿಂಗ್ ಶುಲ್ಕ ಏರಿಕೆ: ಶಾಪಿಂಗ್ ಮಾಡುವಾಗ ಇಎಂಐಗೆ ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದವರಿಗೆ ಇಎಂಐ ವಹಿವಾಟು ನಡೆಸಿದರೆ ನಿಮಗೆ ಬಡ್ಡಿ ಮಾತ್ರ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಬಡ್ಡಿಯ ಜೊತೆಗೆ 99 ರೂ. ಪ್ರೊಸೆಸಿಂಗ್ ಶುಲ್ಕವನ್ನೂ ತೆರಬೇಕಾಗುತ್ತದೆ.
ಬೆಂಕಿಪೊಟ್ಟಣ ದರ ಏರಿಕೆ: ಬರೋಬ್ಬರಿ 14 ವರ್ಷಗಳ ಬಳಿಕ ಬೆಂಕಿಪೊಟ್ಟಣ ದರ ಹೆಚ್ಚಾಗಿದ್ದು, ಇಂದಿನಿಂದ ಒಂದು ಬೆಂಕಿಪೆಟ್ಟಿಗೆಗೆ 2 ರೂ. ನೀಡಬೇಕು.


ಜಿಯೋ ಶುಲ್ಕ ಹೆಚ್ಚಳ: ಏರ್ಟೆಲ್, ವೊಡಾಫೋನ್ ಬಳಿಕ ಜಿಯೋ ಕೂಡ ಪ್ರೀಪೇಯ್ಡ ಶುಲ್ಕವನ್ನು ಹೆಚ್ಚಳ ಮಾಡಿದ್ದು, ಇಂದಿನಿಂದ ಜಿಯೋ ಪ್ಲ್ರಾನ್ ಗಳು ಹೆಚ್ಚಳವಾಗಿವೆ.

Join Whatsapp
Exit mobile version