ರಾಯಚೂರು: ಪತ್ರಿಕಾ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದಿಂದ ನೀಡುವ “ಪತ್ರಿಕೋದ್ಯಮ ರತ್ನ” ಪ್ರಶಸ್ತಿಗೆ ಹಿರಿಯ ಪತ್ರಕರ್ತ, ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಎಸ್. ನಜೀರ್ ಮಸ್ಕಿ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯನ್ನು ಡಿಸೆಂಬರ್ 5ರಂದು ಬೆಂಗಳೂರಿನ ಜೆ,ಸಿ, ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರ ಆವರಣದ ನಯನ ಸಭಾಂಗಣದಲ್ಲಿ ನಡೆಯುವ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ 2020 -22 ನೇ ಸಾಲಿನ ರಾಜ್ಯ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ.
ಹತ್ತನೆ ತರಗತಿಯಲ್ಲಿ ಓದುತ್ತಿದ್ದಾಗಲೇ ಹೋರಾಟ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ನಝೀರ್ ಅವರ ಮುಂದೆ ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ ವಿದ್ಯಾಭ್ಯಾಸ ಮಾಡಿ ಪತ್ರಿಕೋದ್ಯಮ ವೃತ್ತಿಗೆ ಪದಾರ್ಪಣೆ ಮಾಡಿದರು. ಕರ್ನಾಟಕ ಯುವ ಜಾಗೃತಿ ವೇದಿಕೆಯ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅವರು, ಜಾಗೃತಿ ಕಿರಣ, ನಿರ್ಭೀತ ಕನ್ನಡ ಪಾಕ್ಷಿಕ ಪತ್ರಿಕೆಗಳಲ್ಲಿ ಎಂಟು ವರ್ಷಗಳ ಕಾಲ ಕೆಲಸ ನಿರ್ವಹಿಸಿದರು. ಸಾಯಂಕಾಲ ಎಕ್ಸ್ ಪ್ರೆಸ್ , ಭಾರತ ವೈಭವ, ಗಣಿ ನಾಡು, ದಿನ ಪತ್ರಿಕೆ J k ಕನ್ನಡ News, ಹಾಗೂ ಕನ್ನಡ News 1 ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ಜಾಗೃತಿ ಕಿರಣ ಕನ್ನಡ ನಿರ್ಭೀತ ಪಾಕ್ಷಿಕ ಪತ್ರಿಕೆಯ ರಾಯಚೂರು ಜಿಲ್ಲಾ ನಿರ್ಭೀತ ವರದಿಗಾರ ಪ್ರಶಸ್ತಿ”ಗೂ ಅವರು ಭಾಜನರಾಗಿದ್ದಾರೆ.
ಕರ್ನಾಟಕ ವಿಜಯ ಸೇನೆ ರಾಜ್ಯ ಸಮಿತಿಯಿಂದ ಅತ್ಯುತ್ತಮ ವರದಿಗಾರ ಗೌರವಕ್ಕೂ ಪಾತ್ರರಾಗಿರುವ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಯಚೂರು ಜಿಲ್ಲೆ ಸಂಯುಕ್ತಾಶ್ರಯದಲ್ಲಿ ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರ ಟ್ರಸ್ಟ್ (ರಿ) ನಿಂದ ಬಹುರೂಪಿ ಸಿರಿ ಪ್ರಶಸ್ತಿ ಮತ್ತು ಕರ್ನಾಟಕ ಮುಸ್ಲಿಂ ಅಲ್ಪಸಂಖ್ಯಾತರ ಹಕ್ಕು ಹೋರಾಟ ಸಮಿತಿ ವತಿಯಿಂದ ಸಮಾಜಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.