Home ಟಾಪ್ ಸುದ್ದಿಗಳು ಹುಟ್ಟಿನಿಂದಲೇ ಸಿಗುವ ಪೌರತ್ವ ನಿಯಮ ರದ್ದು: ಡೊನಾಲ್ಡ್ ಟ್ರಂಪ್ ಆದೇಶಕ್ಕೆ ಕೋರ್ಟ್ ತಡೆ

ಹುಟ್ಟಿನಿಂದಲೇ ಸಿಗುವ ಪೌರತ್ವ ನಿಯಮ ರದ್ದು: ಡೊನಾಲ್ಡ್ ಟ್ರಂಪ್ ಆದೇಶಕ್ಕೆ ಕೋರ್ಟ್ ತಡೆ

ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ, ಡೊನಾಲ್ಡ್ ಟ್ರಂಪ್ ದೇಶದ ವಲಸೆ ನೀತಿಯನ್ನು ಮರುರೂಪಿಸುವ ಮಹತ್ವದ ಘೋಷಣೆ ಮಾಡಿದ್ದರು. ಜನ್ಮಸಿದ್ಧ ಪೌರತ್ವ ಅಥವಾ ಹುಟ್ಟಿನಿಂದಲೇ ಸಿಗುವ ಪೌರತ್ವ ಕೊನೆಗೊಳಿಸುವ ಟ್ರಂಪ್ ಕಾರ್ಯಾಕಾರಿ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿದೆ. ಯುಎಸ್ ಫೆಡರಲ್ ನ್ಯಾಯಾಲಯವು ಡೊನಾಲ್ಡ್ ಟ್ರಂಪ್​ ಗೆ ದೊಡ್ಡ ಹೊಡೆತವನ್ನು ನೀಡಿದೆ.

ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಜನ್ಮಸಿದ್ಧ ಪೌರತ್ವವನ್ನು ಕೊನೆಗೊಳಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು.

ಟ್ರಂಪ್ ಅವರ ಆದೇಶ ಪ್ರಶ್ನಿಸಿ ಹಲವು ರಾಜ್ಯಗಳು ಕೋರ್ಟ್‌ ಮೆಟ್ಟಿಲೇರಿದ್ದವು. ಇದೀಗ ನ್ಯಾಯಮೂರ್ತಿ ಜಾನ್ ಕಫೆನಾರ್‌ ಟ್ರಂಪ್ ಆದೇಶಕ್ಕೆ 14 ದಿನಗಳ ತಾತ್ಕಾಲಿಕ ತಡೆ ನೀಡಿದ್ದಾರೆ.

ಮುಂದಿನ ತಿಂಗಳವರೆಗೆ, ಅವರ ಪೋಷಕರು ಅಮೆರಿಕನ್ನರಲ್ಲದಿದ್ದರೂ ಹುಟ್ಟಿನಿಂದಲೇ ಅಮೆರಿಕದ ಪೌರತ್ವವನ್ನು ಹೊಂದಿರುವ ಜನರಿಗೆ ಅಮೆರಿಕದ ಪೌರತ್ವವನ್ನು ಕಳೆದುಕೊಳ್ಳುವ ಭಯವಿತ್ತು. ಆದಾಗ್ಯೂ, ನ್ಯಾಯಾಲಯವು ಡೊನಾಲ್ಡ್ ಟ್ರಂಪ್ ಅವರ ಆದೇಶವನ್ನು ಅಸಾಂವಿಧಾನಿಕ ಎಂದು ಸ್ಪಷ್ಟವಾಗಿ ಘೋಷಿಸಿತು.

‘ಈ ನಿರ್ಧಾರ ಸಂವಿಧಾನಿಕ ಎಂದು ಬಾರ್‌ ನ ವಕೀಲರೊಬ್ಬರು ವಾದ ಮಾಡಲು ಹೇಗೆ ಸಾಧ್ಯ’ ಎಂದು ಅಮೆರಿಕದ ನ್ಯಾಯ ಇಲಾಖೆಯ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್‌ ಗೆ ನ್ಯಾಯಾಧೀಶರು ಪ್ರಶ್ನಿಸಿದರಲ್ಲದೆ, ಇದು ನನ್ನ ಮನಸನ್ನು ಕೆರಳಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Join Whatsapp
Exit mobile version