Home ಟಾಪ್ ಸುದ್ದಿಗಳು ಹನಿಟ್ರ್ಯಾಪ್ ಕೇಸ್’ಗೆ ಟ್ವಿಸ್ಟ್ ಕೊಟ್ಟ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ!

ಹನಿಟ್ರ್ಯಾಪ್ ಕೇಸ್’ಗೆ ಟ್ವಿಸ್ಟ್ ಕೊಟ್ಟ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ!

ಬೆಳಗಾವಿ: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಹೊಸ ಟ್ವಿಸ್ಟ್ ನೀಡಿದ್ದಾರೆ. ರಾಜ್ ಕುಮಾರ್ ಟಾಕಳೆ ನನ್ನ ಗಂಡ. ಅವನು ನನಗೆ ಮೋಸ ಮಾಡಿದ್ದಾನೆ. ಅದು ಏನೆಂದು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ನವ್ಯಶ್ರೀ ಸ್ಫೋಟಕ ಹೇಳಿಕೆ ನೀಡಿದ್ದಾರೆ.


ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕಾಂಗ್ರೆಸ್ ನಾಯಕಿ ನವ್ಯಶ್ರೀ ರಾಮಚಂದ್ರರಾವ್ ಮತ್ತು ಈಕೆಯ ಪ್ರಿಯಕರ ತಿಲಕ್ ರಾಜ್ ವಿರುದ್ಧ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜ್ ಕುಮಾರ ಟಾಕಳೆ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಸೋಮವಾರ ತಡರಾತ್ರಿ ಎಫ್ ಐಆರ್ ದಾಖಲಿಸಿದ್ದರು. ‘2020ರಲ್ಲಿ ಬೆಂಗಳೂರಲ್ಲಿ ನನಗೆ ನವ್ಯಶ್ರೀ ಪರಿಚಯವಾದರು. ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ನನಗೆ ಮದುವೆ ಆಗಿ ಮೂವರು ಮಕ್ಕಳಿದ್ದಾರೆ ಎಂಬುವುದು ಆಕೆಗೆ ಗೊತ್ತಿದ್ದರೂ ಪ್ರೀತಿ ಪ್ರೇಮ ಅಂದಳು. ನಮ್ಮಿಬ್ಬರ ನಡುವೆ ದೈಹಿಕ ಸಂಬಂಧವೂ ಬೆಳೆದಿತ್ತು. ನನ್ನೊಂದಿಗೆ ಚೆನ್ನಾಗಿಯೇ ಇದ್ದಳು. ಇದ್ದಕ್ಕಿದ್ದಂತೆ ಖಾಸಗಿ ಕ್ಷಣದ ವೀಡಿಯೋ ಚಿತ್ರೀಕರಿಸಿಕೊಂಡು ನವ್ಯಶ್ರೀ ಮತ್ತು ಈಕೆಯ ಆಪ್ತ ತಿಲಕ್ ಇಬ್ಬರೂ ನನ್ನ ಬಳಿ ಹಣಕ್ಕಾಗಿ ಡಿಮಾಂಡ್ ಇಟ್ಟಿದ್ದರು. 50 ಲಕ್ಷ ರೂ. ಕೊಡಬೇಕು. ಇಲ್ಲವಾದಲ್ಲಿ ವೀಡಿಯೋವನ್ನು ನಿನ್ನ ಹೆಂಡ್ತಿಗೆ ಕಳುಹಿಸುವೆ ಎಂದು ಬೆದರಿಕೆ ಹಾಕಿದ್ದಾರೆ. ಮಾನಸಿಕ ಚಿತ್ರಹಿಂಸೆ ನೀಡಿದ್ದಾರೆ. ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಹೇಳುತ್ತಿದ್ದಾರೆ. ದಯವಿಟ್ಟು ನನಗೆ ರಕ್ಷಣೆ ಕೊಡಿ’ ಎಂದು ದೂರಿನಲ್ಲಿ ರಾಜ್ ಕುಮಾರ ಟಾಕಳೆ ಮನವಿ ಮಾಡಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ನವ್ಯಶ್ರೀ, ‘ದಯವಿಟ್ಟು ನನಗೆ ಒಂದು ದಿನ ಕಾಲಾವಕಾಶ ಕೊಡಿ. ನಾನು 15 ದಿನದಿಂದ ಭಾರತದಲ್ಲಿ ಇರಲೇ ಇಲ್ಲ. ನಿನ್ನೆ ಬೆಳಿಗ್ಗೆ ಭಾರತಕ್ಕೆ ವಾಪಸ್ ಬಂದೆ. ಇಲ್ಲಿ ಏನೇನಾಗಿದೆ ಎಂದು ನಾನು ತಿಳಿದುಕೊಂಡು ಉತ್ತರಿಸುವೆ. ರಾಜಕುಮಾರ್ ಟಾಕಳೆ ನನ್ನ ಗಂಡ ಎಂದು ಹೇಳುವ ಮೂಲಕ ಪಕ್ರರಣಕ್ಕೆ ನವ್ಯಶ್ರೀ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.

Join Whatsapp
Exit mobile version