Home ಟಾಪ್ ಸುದ್ದಿಗಳು ವ್ಯಾಪಾರ ವೈಷಮ್ಯ ಹಿನ್ನೆಲೆ; ವಿದ್ಯಾರ್ಥಿಯ ಅಪಹರಣ, 3 ಗಂಟೆಗಳಲ್ಲಿ‌ ಪತ್ತೆ

ವ್ಯಾಪಾರ ವೈಷಮ್ಯ ಹಿನ್ನೆಲೆ; ವಿದ್ಯಾರ್ಥಿಯ ಅಪಹರಣ, 3 ಗಂಟೆಗಳಲ್ಲಿ‌ ಪತ್ತೆ

ಬೆಂಗಳೂರು: ತೊಗರಿ ಬೇಳೆ ವ್ಯಾಪಾರದ  ಹಣಕಾಸಿನ ವೈಷಮ್ಯದ  ಹಿನ್ನೆಲೆಯಲ್ಲಿ ರೇವಾ ಕಾಲೇಜು ವಿದ್ಯಾರ್ಥಿಯ ಅಪಹರಣ ಪ್ರಕರಣವನ್ನುಬೇಧಿಸಿ ನಾಲ್ವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿಯ ಅಪಹರಣ ಪ್ರಕರಣ ದಾಖಲಾದ 3 ಗಂಟೆಗಳಲ್ಲಿ ಚಿತ್ರದುರ್ಗ ಎಸ್.ಪಿ ಪರಶುರಾಮ್ ಹಾಗೂ ಐಮಂಗಲ ಸಬ್ ಇನ್ಸ್‌ಪೆಕ್ಟರ್  ಮಂಜುನಾಥ್ ಅವರ ಸಹಕಾರದಿಂದ ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ರಮೇಶ್ ರಾಥೋಡ್ (43),  ರಿಜ್ವಾನ್ ಪಟೇಲ್(23), ಇಂದ್ರಜಿತ್ ಪವಾರ್(23), ಹರೀಶ್ ಕುಮಾರ್ (24) ಎಂದು ‌ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ 1 ಇನ್ನೋವ ಹಾಗೂ 1 ಫೋರ್ಚುನರ್ ಕಾರು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಈಶ್ಯಾನ ವಿಭಾಗ ಡಿಸಿಪಿ ಡಾ.ಅನೂಪ್ ಎ. ಶೆಟ್ಟಿ ತಿಳಿಸಿದ್ದಾರೆ.

ಅಪಹರಣಕ್ಕೊಳಗಾದ ವಿದ್ಯಾರ್ಥಿಯ ತಂದೆ ಮಹಾರಾಷ್ಟ ಹಾಗೂ ಆಂಧ್ರಪ್ರದೇಶದಲ್ಲಿ ತೊಗರಿಬೇಳೆ ವ್ಯಾಪಾರ ನಡೆಸುತ್ತಿದ್ದು, ಆರೋಪಿ ರಮೇಶ್ ರಾಥೋಡ್ ಗೆ ವ್ಯಾಪಾರ ವಹಿವಾಟು ಸಂಬಂಧ 3 ಕೋಟಿ ಹಣ ನೀಡಬೇಕಿತ್ತು.  ಈ ವಿಷಯಕ್ಕೆ ಸಂಬಂಧಿಸಿ ಗಲಾಟೆಯೂ ನಡೆದಿತ್ತು.

ಆದರೆ ನಿನ್ನೆ  ಮಧ್ಯಾಹ್ನ 12 ಗಂಟೆಯ ಹೊತ್ತಿಗೆ  ಆರೋಪಿಗಳು  ವಿದ್ಯಾರ್ಥಿಯನ್ನು ಅಪಹರಣ ಮಾಡಿದ್ದಾರೆ.

ತುಮಕೂರು ಹೊರ ವಲಯದಲ್ಲಿ ತಪ್ಪಿಸಿಕೊಂಡ ವಿದ್ಯಾರ್ಥಿಯು ಪೊಲೀಸರ‌ ಬಳಿ ಹೋಗಿ ನೀಡಿರುವ  ಮಾಹಿತಿ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

Join Whatsapp
Exit mobile version