Home ಟಾಪ್ ಸುದ್ದಿಗಳು ಟಿಎಂಸಿ ಪತ್ರಿಕೆಯಲ್ಲಿ ಬರೆದುದಕ್ಕೆ ಕಮ್ಯೂನಿಸ್ಟ್ ಪಕ್ಷದಿಂದ ಮಹಿಳೆ ಉಚ್ಚಾಟನೆ

ಟಿಎಂಸಿ ಪತ್ರಿಕೆಯಲ್ಲಿ ಬರೆದುದಕ್ಕೆ ಕಮ್ಯೂನಿಸ್ಟ್ ಪಕ್ಷದಿಂದ ಮಹಿಳೆ ಉಚ್ಚಾಟನೆ

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ಪತ್ರಿಕೆಯಾದ ಜಾಗೋ ಬಾಂಗ್ಲಾ ಪತ್ರಿಕೆಯಲ್ಲಿ ಬಂಗಾಳದ ರಾಜಕೀಯದಲ್ಲಿ ಮಹಿಳೆಯರು ಲೇಖನ ಬರೆದುದಕ್ಕೆ ಸಿಪಿಎಂ ಪಕ್ಷವು ಅಜಂತಾ ಬಿಸ್ವಾಸ್ ಅವರನ್ನು ಪಕ್ಷದಿಂದ ಹೊರಹಾಕಿದೆ. ಇವರು ಸಿಪಿಎಂ ಪಕ್ಷದ ಹಿಂದಿನ ರಾಜ್ಯ ಕಾರ್ಯದರ್ಶಿ ಅನಿಲ್ ಬಿಶ್ವಾಸ್ ರ ಮಗಳು.


ರಬೀಂದ್ರ ಭಾರತಿ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದ ಪ್ರೊಫೆಸರ್ ಆಗಿರುವ ಅಜಂತಾರನ್ನು ಸಿಪಿಎಂನ ಕೊಲ್ಕತ್ತಾ ಜಿಲ್ಲಾ ಸಮಿತಿಯು ಆರು ತಿಂಗಳ ಕಾಲ ಪಕ್ಷದಿಂದ ಹೊರಹಾಕಿದೆ.

Join Whatsapp
Exit mobile version