Home ಟಾಪ್ ಸುದ್ದಿಗಳು ಬೊಮ್ಮಾಯಿ ಭೇಟಿ ಬಳಿಕ ರಾಜಿನಾಮೆ ನಿರ್ಧಾರದಿಂದ ಹಿಂದೆ ಸರಿದ ಸಚಿವ ಆನಂದ್ ಸಿಂಗ್

ಬೊಮ್ಮಾಯಿ ಭೇಟಿ ಬಳಿಕ ರಾಜಿನಾಮೆ ನಿರ್ಧಾರದಿಂದ ಹಿಂದೆ ಸರಿದ ಸಚಿವ ಆನಂದ್ ಸಿಂಗ್

ಬೆಂಗಳೂರು : ಖಾತೆ ಬದಲಾವಣೆ ವಿಚಾರವಾಗಿ ಅಸಮಾಧಾನ ಗೊಂಡಿದ್ದ ಸಚಿವ ಆನಂದ್ ಸಿಂಗ್ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಿಎಂ ಭೇಟಿಯ ಬಳಿಕ ಆನಂದ್ ಸಿಂಗ್ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಇಂದು ಆನಂದ್ ಸಿಂಗ್ ಮುಖ್ಯಮಂತ್ರಿ ಜೊತೆ ಸಮಾಧಾನಕರ ಭೇಟಿ ನಡೆಸಿದ್ದು,ಈ ಮಧ್ಯೆ, ಸಚಿವರಾಗಿ ಖಾತೆ ಜವಾಬ್ದಾರಿ ನಿರ್ವಹಿಸುವುದಾಗಿ ಆನಂದ್ ಸಿಂಗ್ ಹೇಳಿದ್ದಾರೆ. ಬೆಳಿಗ್ಗೆ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನೂ ಆನಂದ್ ಸಿಂಗ್ ಭೇಟಿ ಮಾಡಿದ್ದಾರೆ. ಸಿಎಂ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್, “ಮೊದಲು ಖಾತೆಯನ್ನು ನಿರ್ವಹಿಸಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ನಳಿನ್ ಕುಮಾರ್ ಕಟೀಲ್ ಹೇಳಿದ್ದು, ಅವರ ಆದೇಶದಂತೆ ಖಾತೆಯನ್ನು ಇಂದು ವಹಿಸಿಕೊಳ್ಳುತ್ತೇನೆ ಎಂದ್ದಿದ್ದಾರೆ.

ಇನ್ನು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ತನಗೆ ನೀಡಲಾಗಿರುವ ಪರಿಸರ ಮತ್ತು ಪ್ರವಾಸೋದ್ಯಮ ಖಾತೆಯನ್ನು ಬದಲಿಸಬೇಕು ಎಂದು ಆನಂದ್ ಸಿಂಗ್ ಒತ್ತಾಯಿಸಿದ್ದು. ರಾಜೀನಾಮೆ ನೀಡುವ ಹೇಳಿಕೆಯನ್ನೂ ನೀಡಿದ್ದರು. ನಂತರ ಬೊಮ್ಮಾಯಿ- ಬಿಎಸ್ ವೈ ಜೊತೆ ಮಾತುಕತೆ ನಡೆಸಿ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.ಮುಖ್ಯಮಂತ್ರಿ ಹೈ ಕಮಾಂಡ್ ಭೇಟಿ ಬಳಿಕ ಸಚಿವ ಆನಂದ್ ಸಿಂಗ್ ಅವರು ಪಟ್ಟು ಹಿಡಿದಿದ್ದ ಖಾತೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

Join Whatsapp
Exit mobile version