Home ಕರಾವಳಿ ದ.ಕ. ಜಿಲ್ಲೆಯಲ್ಲೂ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಹೊರಹಾಕಿದ ಕಾಲೇಜುಗಳು !

ದ.ಕ. ಜಿಲ್ಲೆಯಲ್ಲೂ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಹೊರಹಾಕಿದ ಕಾಲೇಜುಗಳು !

ಮಂಗಳೂರು: ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವರದಿಯಾಗಿದೆ.

ದ.ಕ. ಜಿಲ್ಲೆಯ ಆರು ಕಾಲೇಜುಗಳಲ್ಲಿ ಹಿಜಾಬ್ ಹಾಕಿದ ಕಾರಣಕ್ಕಾಗಿ ತರಗತಿ ಪ್ರವೇಶ ನಿರಾಕರಿಸಲಾಗಿದೆ. ಇದರಿಂದ ವಿದ್ಯಾರ್ಥಿನಿಯರು ಮನೆಗೆ ವಾಪಸಾಗಿದ್ದಾರೆ.

ನಗರದ ದಯಾನಂದ ಪೈ ಪದವಿ ಕಾಲೇಜಿನ ಇಬ್ಬರು ಹಾಗೂ ಮುಲ್ಕಿ ಪಾಂಪೈ ಪದವಿ ಕಾಲೇಜಿನ 26 , ಇಂದಿರಾ ನಗರ ಡಿಗ್ರಿ ಕಾಲೇಜಿನ 15, ಮಹಾವೀರ ಕಾಲೇಜಿನ 6 ವಿದ್ಯಾರ್ಥಿನಿಯರು ನ್ಯಾಯಾಲಯದ ಆದೇಶ ಬರುವವರೆಗೆ ತರಗತಿಗೆ ಹಾಜರಾಗದಿರಲು ನಿರ್ಧರಿಸಿ ವಾಪಸ್ ಹೋಗಿದ್ದಾರೆ.

 ಅಲ್ಲದೆ ಮುಡಿಪು ಪದವಿ ಕಾಲೇಜಿನ 22 ವಿದ್ಯಾರ್ಥಿನಿಯರು, ಮೊಂಟೆಪದವು ಕಾಲೇಜಿನ 11 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಆದರೆ ಅವರಿಗೆ ತರಗತಿ ಪ್ರವೇಶಿಸಿಲು ಆಡಳಿತ ಮಂಡಳಿ ಅವಕಾಶ ನಿರಾಕರಿಸಿತು. ಕಾಲೇಜಿನ ಆಡಳಿತ ಮಂಡಳಿಯ ಪ್ರಮುಖರು ಅವರನ್ನು ಪ್ರಾಂಶುಪಾಲರ ಕಚೇರಿಗೆ ಕರೆಸಿಕೊಂಡು ನ್ಯಾಯಾಲಯದ ಸೂಚನೆಯನ್ನು ತಿಳಿಸಿ, ಆದೇಶವನ್ನು ಪಾಲಿಸುವಂತೆ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಹಿಜಾತ್ ತೆಗೆದಿರಿಸಿ ತರಗತಿಗೆ ಹಾಜರಾಗಿದ್ದಾರೆ.

ಹಾಗಾಗಿ ದ.ಕ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತ ಮಂಡಳಿ ವ್ಯವಸ್ಥಿತವಾಗಿ ಗೊಂದಲ ಉಂಟಾಗದಂತೆ ಕ್ರಮ ವಹಿಸಿದೆ. ಆರು ಕಾಲೇಜುಗಳಿಗೆ ನಾನು ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದೇವೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

Join Whatsapp
Exit mobile version