Home ಟಾಪ್ ಸುದ್ದಿಗಳು “ನೀನು ಸುಮ್ಮನಿದ್ದರೆ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ”: ಕಾರ್ಯಕ್ರಮ ನಿರೂಪಕಿ ಮೇಲೆ ಗರಂ ಆದ ಸಿಎಂ ಬೊಮ್ಮಾಯಿ

“ನೀನು ಸುಮ್ಮನಿದ್ದರೆ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ”: ಕಾರ್ಯಕ್ರಮ ನಿರೂಪಕಿ ಮೇಲೆ ಗರಂ ಆದ ಸಿಎಂ ಬೊಮ್ಮಾಯಿ

ಬೆಂಗಳೂರು: ಕಾರ್ಯಕ್ರಮದ ನಿರೂಪಕಿ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗರಂ ಆದ ಘಟನೆ ಬಿಜೆಪಿಯ ಅಮೃತ ಭಾರತಿಗೆ ಕುರುನಾಡ ಜಾತ್ರೆ ಕಾರ್ಯಕ್ರಮದಲ್ಲಿ ನಿನ್ನೆ ನಡೆದಿದೆ.


ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಿನ್ನೆ ಬಿಜೆಪಿಯ ಅಮೃತ ಭಾರತಿಗೆ ಕುರುನಾಡ ಜಾತ್ರೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಿಎಂ ಭಾಷಣ ಮುಗಿಯುತ್ತಿದ್ದಂತೆ ಜನರು ಎದ್ದು ಹೊರಡಲು ಆರಂಭಿಸುತ್ತಾರೆ. ಈ ವೇಳೆ ನಿರೂಪಕಿ ಪ್ರತಿಭಾ ಅವರು ಎಲ್ಲರೂ ಚಪ್ಪಾಳೆ ತಟ್ಟಿ ಕಾರ್ಯಕ್ರಮವನ್ನು ಹುರಿದುಂಬಿಸಬೇಕು. ಯಾರೂ ಕೂಡ ಹೋಗಬೇಡಿ ಎಂದಿದ್ದಾರೆ. ಇದರಿಂದ ಸಿಟ್ಟಾದ ಸಿಎಂ ಈಗ ನೀವು ಸುಮ್ಮನಿದ್ದರೆ ಆರೋಗ್ಯಕ್ಕೆ ಒಳ್ಳೆಯದು ಹೇಳಿದ್ದಾರೆ.


ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿಎಂಗೆ ಬಿ ಪಿ ಜಾಸ್ತಿಯಾಗಿದೆ ಎಂದು ಸಾರ್ವಜನಿಕರು ಟ್ರೋಲ್ ಮಾಡುತ್ತಿದ್ದಾರೆ.

https://twitter.com/manjujb1/status/1559431693693374464
Join Whatsapp
Exit mobile version