Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ಅಪ್ರಾಪ್ತೆಗೆ ಮಗು ಕರುಣಿಸಿದಾತ ಪೊಲೀಸ್ ಅತಿಥಿ

ಚಿಕ್ಕಮಗಳೂರು: ಅಪ್ರಾಪ್ತೆಗೆ ಮಗು ಕರುಣಿಸಿದಾತ ಪೊಲೀಸ್ ಅತಿಥಿ

ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ ಆರೋಪದಲ್ಲಿ ಯುವಕನೊಬ್ಬನನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ ಘಟನೆ ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಆರೋಪಿಯನ್ನು ಕೊಪ್ಪ ತಾಲೂಕಿನ ಅಗಳಗಂಡಿಯ ಧ್ರುವ ಕುಮಾರ್ (27) ಎಂದು ಗುರುತಿಸಲಾಗಿದೆ.
ಸಂತ್ರಸ್ತೆ ಬಾಲಕಿಯು ಕಾಲೇಜು ವಿದ್ಯಾರ್ಥಿಯಾಗಿದ್ದು, ಆಕೆಗೆ ಮಗುವೂ ಜನಿಸಿದೆ.


ಆರೋಪಿಯನ್ನು ನಿನ್ನೆ ಬಂಧಿಸಿದ ಶೃಂಗೇರಿ ಠಾಣಾ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿ ಚಿಕ್ಕಮಗಳೂರಿನ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ. ಈ ಬಗ್ಗೆ, ಹೆಚ್ಚಿನ ಮಾಹಿತಿ ವಿಚಾರಣೆಯ ಬಳಿಕ ತಿಳಿದು ಬರಲಿದೆ.

Join Whatsapp
Exit mobile version