Home ಟಾಪ್ ಸುದ್ದಿಗಳು ಪೇಂಟರ್ ಗೆ ಒಲಿದ ಬರೋಬ್ಬರಿ 12ಕೋಟಿ ರೂ. ಲಾಟರಿ!

ಪೇಂಟರ್ ಗೆ ಒಲಿದ ಬರೋಬ್ಬರಿ 12ಕೋಟಿ ರೂ. ಲಾಟರಿ!

ತಿರುವನಂತಪುರಂ: ಕ್ರಿಸ್‌ಮಸ್-ಹೊಸ ವರ್ಷದ ಬಂಪರ್ ಲಾಟರಿಯಲ್ಲಿ ಕೇರಳದ ಪೇಂಟರ್ ನಿಗೆ 12 ಕೋಟಿ ಲಾಟರಿ ಬಹುಮಾನ ಲಭಿಸಿದ್ದು, ರಾತ್ರೋರಾತ್ರಿ ಕೋಟ್ಯಧೀಶರಾಗಿದ್ದಾರೆ.


ಪೇಂಟಿಂಗ್ ವೃತ್ತಿಯಲ್ಲಿರುವ ಕೊಟ್ಟಾಯಂ ಪಟ್ಟಣದ ಐಮನಂನ ಸಿ ಎನ್ ಸದಾನಂದನ್ ಅವರು ತಮ್ಮ ಸ್ನೇಹಿತ ಹಾಗೂ ಲಾಟರಿ ಏಜೆಂಟ್ ಸೆಲ್ವಕುಮಾರ್ ಅವರಿಂದ ಈ ಲಾಟರಿ ಖರೀದಿ ಮಾಡಿದ್ದರು. ಗೆದ್ದ 12 ಕೋಟಿಯಲ್ಲಿ ತೆರಿಗೆಯೆಲ್ಲ ಕಳೆದು 7.39 ಕೋಟಿ ರೂ. ಹಣ ಪೇಂಟರ್ ಕೈಸೇರಲಿದೆ.


ಕೇರಳ ರಾಜ್ಯ ಲಾಟರಿ ಇಲಾಖೆಯು ಮುದ್ರಿಸಲಾದ 47,40,000 ಕ್ರಿಸ್ಮಸ್-ಹೊಸ ವರ್ಷದ ಬಂಪರ್ ಟಿಕೆಟ್‌ಗಳಲ್ಲಿ 47,36,528 ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.


ಕೇರಳದಲ್ಲಿ ಮದ್ಯ ಮತ್ತು ಲಾಟರಿ ಮಾರಾಟದಿಂದ ಸಾಕಷ್ಟು ತೆರಿಗೆ ಹಣ ರಾಜ್ಯ ಸರ್ಕಾರದ ಬೊಕ್ಕಸ ತುಂಬುತ್ತಿದೆ. ಲಾಟರಿ ಮಾರಾಟದಿಂದ 127 ಕೋಟಿ ರೂ. ತೆರಿಗೆ ಇಲಾಖೆಗೆ ಹರಿದುಬರುತ್ತಿದೆ ಎಂದು ವರದಿಯಾಗಿದೆ.

Join Whatsapp
Exit mobile version