Home ಟಾಪ್ ಸುದ್ದಿಗಳು ‘ಬಿಜೆಪಿಯನ್ನು ಸೋಲಿಸುವೆ’: ‘ಅನ್ನ ಸಂಕಲ್ಪ’ ಸ್ವೀಕರಿಸಿದ ಅಖಿಲೇಶ್ ಯಾದವ್

‘ಬಿಜೆಪಿಯನ್ನು ಸೋಲಿಸುವೆ’: ‘ಅನ್ನ ಸಂಕಲ್ಪ’ ಸ್ವೀಕರಿಸಿದ ಅಖಿಲೇಶ್ ಯಾದವ್

ಲಖ್ನೋ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಾಗಿ, ಸಮಾಜವಾದಿ ಪಕ್ಷದ (SP) ಅಧ್ಯಕ್ಷ ಅಖಿಲೇಶ್ ಯಾದವ್ ಅವರು‘ಅನ್ನ ಸಂಕಲ್ಪ’ ಸ್ವೀಕರಿಸಿದರು.


ಲಖಿಂಪುರ ಖೇರಿ ಜಿಲ್ಲೆಯ ರೈತ ತೇಜಿಂದರ್ ಸಿಂಗ್ ವಿರ್ಕ್ ಸಮ್ಮುಖದಲ್ಲಿ ಅಖಿಲೇಶ್ ಬಿಜೆಪಿಯನ್ನು ಸೋಲಿಸುವೆ ಎಂದು ‘ಅನ್ನ ಸಂಕಲ್ಪ’ ಸ್ವೀಕರಿಸಿದ್ದಾರೆ.


ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ರೈತರ ಮೇಲೆ ಹಾಕಿರುವ ಪ್ರಕರಣ ವಾಪಸ್ ಪಡೆಯುವ ಬಗ್ಗೆ ಭರವಸೆ ನೀಡಿದ ಅವರು, ರೈತರು ಬೆಳೆದ ಪ್ರತಿಯೊಂದು ಬೆಲೆಗೆ ಬೆಂಬಲ ಬೆಲೆ, ರೈತರಿಗೆ ನೀರಾವರಿಗೆ ಉಚಿತ ವಿದ್ಯುತ್, ರೈತರಿಗೆ ಬಡ್ಡಿರಹಿತ ಸಾಲ, ಪಿಂಚಣಿ ಹಾಗೂ ವಿಮೆ ನೀಡುವುದಾಗಿ ಘೋಷಿಸಿದರು. ಈ ಎಲ್ಲ ಘೋಷಣೆಗಳು ಪಕ್ಷದ ಚುನಾವಣಾ ಪ್ರಣಾಳಿಕೆಯ ಭಾಗವಾಗಿರಲಿವೆ ಎಂದು ಅವರು ಹೇಳಿದ್ದಾರೆ.

Join Whatsapp
Exit mobile version