Home ಟಾಪ್ ಸುದ್ದಿಗಳು ಶ್ರೀರಂಗಪಟ್ಟಣ ಮಸೀದಿ ಕೆಡವಲು ಆಗ್ರಹಿಸಿದ್ದ ಕಾಳಿ ಸ್ವಾಮಿ ಬಂಧನ !

ಶ್ರೀರಂಗಪಟ್ಟಣ ಮಸೀದಿ ಕೆಡವಲು ಆಗ್ರಹಿಸಿದ್ದ ಕಾಳಿ ಸ್ವಾಮಿ ಬಂಧನ !

ಮಂಡ್ಯ: ಶ್ರೀರಂಗಪಟ್ಟಣ ಮಸೀದಿ ಕೆಡವುವಂತೆ ಕಾಳಿ ಸ್ವಾಮಿ ಬಿಡುಗಡೆ ಮಾಡಿದ್ದ ವಿವಾದಾತ್ಮಕ ವಿಡಿಯೋ ಹಿನ್ನೆಲೆಯಲ್ಲಿ ಸಮಾಜದಲ್ಲಿ ಕೋಮು ಸೌಹಾರ್ದತೆ ಹಾನಿ ಆಗುವ ನಿಟ್ಟಿನಲ್ಲಿ ಚಿಕ್ಕಮಗಳೂರು ಪೊಲೀಸರು ರಿಷಿ ಕುಮಾರ್ ಸ್ವಾಮಿಯನ್ನು ಬಂಧಿಸಿದ್ದಾರೆ.

ನಿನ್ನೆ ರಿಷಿ ಕುಮಾರ್ ಸ್ವಾಮಿ ಮಸೀದಿ ಮುಂದೆ ನಿಂತು ವೀಡಿಯೋ ಮಾಡಿ ಹಿಂದೂಗಳಿಗೆ ಕರೆ ನೀಡಿದ್ದರು. ಶ್ರೀರಂಗಪಟ್ಟಣದ ದೇವಾಲಯವನ್ನು ಕೆಡವಿ ಮಸೀದಿ ಮಾಡಿದ್ದಾರೆ. ಇದು ಮೊದಲು ದೇವಾಲಯವಿತ್ತು. ಇದನ್ನು ಕೆಡವಿದ್ದಾರೆ ಎಂದು ಆರೋಪಿಸಿ, ಇದನ್ನು ಆದಷ್ಟು ಬೇಗ ಬಾಬ್ರಿ ಮಸೀದಿ ರೀತಿಯಲ್ಲಿ ಕೆಡವಬೇಕೆಂದು ರಿಷಿ ಕುಮಾರ್ ಸ್ವಾಮಿ  ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.

ಮಂಗಳವಾರ ಬೆಳಿಗನ ಜಾವ 4-30ಕ್ಕೆ ಚಿಕ್ಕಮಗಳೂರು ಮಠದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.

Join Whatsapp
Exit mobile version