Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ಹೃದಯಾಘಾತದಿಂದ ಶಾಲಾ  ಬಾಲಕಿ ಮೃತ್ಯು

ಚಿಕ್ಕಮಗಳೂರು: ಹೃದಯಾಘಾತದಿಂದ ಶಾಲಾ  ಬಾಲಕಿ ಮೃತ್ಯು

ಮೂಡಿಗೆರೆ:  ಹೃದಯಾಘಾತದಿಂದ ಶಾಲಾ  ಬಾಲಕಿಯೊಬ್ಬಳು ಮೃತಪಟ್ಟಿರುವ  ಘಟನೆ ಮೂಡಿಗೆರೆಯಲ್ಲಿ ನಡೆದಿದೆ.

ಮೂಡಿಗೆರೆ ನಗರದ  ಬೆಥನಿ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಮೃತ ಬಾಲಕಿ. ನಿನ್ನೆ ರಾತ್ರಿ 7.30 ರ ವೇಳೆಗೆ ಹೃದಯಾಘಾತ ಸಂಭವಿಸಿದೆ ಎಂದು ಪೋಷಕರು ತಿಳಿಸಿದ್ದಾರೆ.

ಮಗಳ ವಿರಹದ ನೋವಿನ ನಡುವೆಯೂ  ಬೇರೊಬ್ಬರ ಬಾಳು ಬೆಳಕಾಗಲಿ ಎಂಬ ಸಂಕಲ್ಪ ಕೈಗೊಂಡ ಹೆತ್ತವರು  ಆಕೆಯ ಎರಡು ಕಣ್ಣುಗಳನ್ನು ದಾನ ಮಾಡಲು ಮುಂದಾಗಿದ್ದರು.

ವೈಷ್ಣವಿಯ ವಿರಹವು ಕುಟುಂಬಿಕರ ಸಹಿತ  ಸ್ನೇಹಿತರು, ಶಾಲಾ ಶಿಕ್ಷಕರು ಮತ್ತು ಸಾರ್ವಜನಿಕರಲ್ಲಿ ಅತೀವ ದುಃಖವನ್ನುಂಟು ಮಾಡಿದೆ.

Join Whatsapp
Exit mobile version