Home ಟಾಪ್ ಸುದ್ದಿಗಳು ಇರಾಕ್‌| ಗ್ಯಾಸ್ ಟ್ಯಾಂಕರ್ ಸ್ಫೋಟ; 9 ಮಂದಿ ಸಾವು, 13 ಮಂದಿಗೆ ಗಾಯ

ಇರಾಕ್‌| ಗ್ಯಾಸ್ ಟ್ಯಾಂಕರ್ ಸ್ಫೋಟ; 9 ಮಂದಿ ಸಾವು, 13 ಮಂದಿಗೆ ಗಾಯ

ಬಗ್ದಾದ್: ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಠ 9 ಮಂದಿ ಮೃತಪಟ್ಟಿದ್ದು, 13ಮಂದಿ ಗಂಭೀರ ಗಾಯಗೊಂಡ ಘಟನೆ ಇರಾಕ್‌ನ ರಾಜಧಾನಿ ಬಗ್ದಾದ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.


ಇದೊಂದು ಅಪಘಾತವಾಗಿದ್ದು ಯಾವುದೇ ಉದ್ದೇಶಪೂರ್ವಕ ದಾಳಿ ಆಗಿರಲಿಲ್ಲ. ಪೂರ್ವ ಬಾಗ್ದಾದ್‌ನ ಫುಟ್ಬಾಲ್ ಕ್ರೀಡಾಂಗಣದ ಸಮೀಪದ ಕಾರ್ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡಿದ್ದು, ಸ್ಫೋಟದ ಸದ್ದು ಬಾಗ್ದಾದ್ ನಗರದಾದ್ಯಂತ ಕೇಳಿಸಿದೆ ಎಂದು ಭದ್ರತಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.


ಜನವಸತಿ ಪ್ರದೇಶದ ಸಮೀಪ ಟ್ಯಾಂಕರ್ ಸ್ಫೋಟಗೊಂಡಿದ್ದು, ಸ್ಫೋಟಕ್ಕೆ ಸಿಲುಕಿ 9 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭದ್ರತಾ ಪಡೆ ಕಮಾಂಡರ್ ಅಹ್ಮದ್ ಸಲೀಂ ತಿಳಿಸಿದ್ದಾರೆ.

Join Whatsapp
Exit mobile version