ಮೂಡಿಗೆರೆ: ಕಾಫಿ ತೋಟದಲ್ಲಿ ಅಕ್ರಮವಾಗಿ ಕಳ್ಳಭಟ್ಟಿಯನ್ನು ಸಂಗ್ರಹಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ದಾಳಿ ಮಾಡಿ ಕಳ್ಳಭಟ್ಟಿಯನ್ನುವಶಪಡಿಸಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಜಾವಳಿ ಗ್ರಾಮದ ಕಾಳಿಕಟ್ಟೆಯಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದ ಕಾಳಿಕಟ್ಟೆ ವಾಸಿ ಸುರೇಶ್ ಬಿನ್ ವೀರಪ್ಪ ಎಂಬಾತ ತೋಟದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ. ಪೊಲೀಸ್ ದಾಳಿಯ ಸಂದರ್ಭ ಆರೋಪಿ ಪರಾರಿಯಾಗಿದ್ದು ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
100 ಲೀಟರ್ ಕಳೆನಾಶಕ ಮತ್ತು ಎರಡು ಲೀಟರ್ ಕಳ್ಳಭಟ್ಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ಧಾರೆ.
ಕಾರ್ಯಾಚರಣೆ ಯಲ್ಲಿ ಬಾಳೂರು ಠಾಣೆಯ ಸಬ್ ಇನ್ಸ್ಪೆಕ್ಟರ್ ಸಿ.ಸಿ.ಪವನ್ ಕುಮಾರ್, ಪೊಲೀಸರಾದ ಮಹೇಶ್, ವಸಂತ್,ಮನು, ಪ್ರವೀಣ್, ಅಭಿಜಿತ್,ಸತೀಶ್, ಓಂಕಾರ,ಹೇಮಂತ್, ಪ್ರದೀಪ್ ಭಾಗಿಯಾಗಿದ್ದರು.