ಬೆಂಗಳೂರು: ಬೆಂಗಳೂರಿನ ಶಾಲೆಯೊಂದರ ರಸ್ತೆಯುದ್ದಕ್ಕೂ Sorry ಎಂದು ಬರೆಯಲಾಗಿದ್ದು, ಇದೀಗ ಪೊಲೀಸರು ವ್ಯಕ್ತಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.
ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್ ಬಳಿ ತಡರಾತ್ರಿಯಲ್ಲಿ ಬರೆಯಲಾಗಿದೆ. ಬೆಳಗ್ಗೆ ಎದ್ದು ನೋಡಿದ ಸ್ಥಳೀಯರಿಗೆ ಶಾಕ್ ಆಗಿದ್ದು, ಯಾರು ಮತ್ತು ಯಾಕೆ ಈ ರೀತಿ Sorry ಕೇಳಿರುವುದು ಎಂದು ಸ್ಥಳೀಯರು ಕೂಡ ತಲೆಕೆಡಿಸಿಕೊಂಡಿದ್ದಾರೆ. ಇತ್ತ ಪೊಲೀಸರು ಕೂಡ Sorry ಬರೆದ ವ್ಯಕ್ತಿಯನ್ನು ಹುಡುಕಾಟ ನಡೆಸುತ್ತಿದ್ದಾರೆ.