Home ಟಾಪ್ ಸುದ್ದಿಗಳು ಚಿನ್ನ ಅಡವಿಟ್ಟು ಸಾಲ ಪಡೆದ ಪತಿ, ಮಾವನ ವಿರುದ್ಧ ನಟಿ ಚೈತ್ರ ಹಳ್ಳಿಕೇರಿ ದೂರು

ಚಿನ್ನ ಅಡವಿಟ್ಟು ಸಾಲ ಪಡೆದ ಪತಿ, ಮಾವನ ವಿರುದ್ಧ ನಟಿ ಚೈತ್ರ ಹಳ್ಳಿಕೇರಿ ದೂರು

ಮೈಸೂರು: ಬ್ಯಾಂಕ್ ಖಾತೆ ದುರ್ಬಳಕೆ ಆರೋಪದಡಿ ನಟಿ ಚೈತ್ರ ಹಳ್ಳಿಕೇರಿ ಅವರು ಪತಿ ಮತ್ತು ಮಾವನ ವಿರುದ್ಧ ಜಯಲಕ್ಷ್ಮಿಪುರಂ ಠಾಣೆಗೆ ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿದೆ. ನನ್ನ ಅನುಮತಿ ಇಲ್ಲದೇ ಚಿನ್ನ ಅಡವಿಟ್ಟು ಸಾಲ ಪಡೆದಿದ್ದಾರೆ ಎಂದು ಪತಿ ಬಾಲಾಜಿ, ಮಾವ ಪೋತರಾಜ್ ಮತ್ತು ಸೌತ್ ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಆರೋಪ ಮಾಡಿ ನಟಿ ದೂರು ಸಲ್ಲಿಸಿದ್ದಾರೆ.


ನಟಿ ಚೈತ್ರ ಹಳ್ಳಿಕೇರಿ ದೂರಿನ ಅನ್ವಯ ವಂಚನೆ, ಜೀವ ಬೆದರಿಕೆಯಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗುರು ಶಿಷ್ಯ, ಶ್ರೀ ದಾನಮ್ಮ ದೇವಿ ಚಿತ್ರದಲ್ಲಿ ನಟಿಸಿರುವ ನಟಿ ಈ ಹಿಂದೆ ಕೂಡಾ ಪೋತರಾಜ್ ವಿರುದ್ದ ಬೆಂಗಳೂರಿನ ಬಸವನಗುಡಿ ಠಾಣೆಗೆ ದೂರು ನೀಡಿದ್ದರು. ಇದೀಗ ಮತ್ತೆ ಬ್ಯಾಂಕ್ ಖಾತೆ ದುರ್ಬಳಕೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

Join Whatsapp
Exit mobile version