ಚಿಕ್ಕಮಗಳೂರು: ಆನೆ ದಾಳಿ; ತಪ್ಪಿದ ದುರಂತ

Prasthutha|

ಚಿಕ್ಕಮಗಳೂರು: ಕೆಲಸ ಮುಗಿಸಿ ಮನೆಗೆ ಮರಳುತ್ತಿರುವ ವೇಳೆ ಮಾರ್ಗ ಮಧ್ಯೆ ಅನೆ ಅಡ್ಡ ಗಟ್ಟಿ ದಾಳಿ ನಡೆಸಿದ ಘಟನೆ ಮೂಡಿಗೆರೆ ತಾಲೂಕಿನ ಉರುಬಗೆ ಗ್ರಾಮದಲ್ಲಿ ನಡೆದಿದೆ.

- Advertisement -

ಗಾಯಾಳುವನ್ನು ಸತ್ತಿಗನ ಹಳ್ಳಿ ನಿವಾಸಿ  ಪ್ರಭಾಕರ ಎಂದು ಗುರುತಿಸಲಾಗಿದೆ. MSIL ನಲ್ಲಿಕೆಲಸ ಮುಗಿಸಿ ಮರಳುತ್ತಿರುವಾಗ ರಾತ್ರಿ 9 ಗಂಟೆಯ ವೇಳೆಗೆ ಘಟನೆ ನಡೆದಿದೆ.

ಆನೆ ದಾಳಿಯಿಂದಾಗಿ ಕಾಲಿಗೆ  ಮತ್ತು ಹೊಟ್ಟೆಗೆ ತೀವ್ರ ಗಾಯಗಳಾಗಿದ್ದು, ಅದೃಷ್ಟಾವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಥಮ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ   ಆಸ್ಪತ್ರೆಯೊಂದಕ್ಕೆ  ಕರೆದೊಯ್ಯಲಾಗಿದೆ.  ಸುದ್ಧಿ ತಿಳಿದು ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನಿಡಿ  ಆರೋಗ್ಯ  ಸ್ಥಿತಿ ವಿಚಾರಿಸಿದರು.

Join Whatsapp
Exit mobile version