Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ಕೆನರಾ ಬ್ಯಾಂಕ್ ವತಿಯಿಂದ ಸ್ವಾತಂತ್ರ್ಯ ಸಂಸ್ಮರಣಾ ಚಿತ್ರ ಪ್ರದರ್ಶನ

ಚಿಕ್ಕಮಗಳೂರು: ಕೆನರಾ ಬ್ಯಾಂಕ್ ವತಿಯಿಂದ ಸ್ವಾತಂತ್ರ್ಯ ಸಂಸ್ಮರಣಾ ಚಿತ್ರ ಪ್ರದರ್ಶನ

ಚಿಕ್ಕಮಗಳೂರು: ಭಾರತದ ವಿಭಜನೆಯ ಸಂದರ್ಭದಲ್ಲಿ ನಡೆದ ಭೀಕರತೆಯ ಸಂಸ್ಮರಣಾ ದಿನದ ಚಿತ್ರ ಪ್ರದರ್ಶನವನ್ನುನಗರದ ಐ.ಜಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕೆನರಾ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥರಾದ ಅನಿಲ್ ಕುಮಾರ್ ಉದ್ಘಾಟಿಸಿದರು.


ಈ ವೇಳೆ ಮಾತನಾಡಿದ ಅವರು, ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು 75 ವರ್ಷ ಆಗಿದೆ. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಸ್ವಾತಂತ್ರ್ಯ ಪಡೆಯುವ ಮೊದಲು ಮತ್ತು ನಂತರ ನಡೆದ ಭೀಕರ ಘಟನೆಗಳನ್ನು ಪೋಟೋ ಮೂಲಕ ಸಾರ್ವಜನಿಕರಿಗೆ ತಿಳಿಸುವ ಸಣ್ಣ ಪ್ರಯತ್ನ ನಡೆಸಲಾಗುತ್ತಿದೆ. ಸಾರ್ವಜನಿಕರು ಆ ದಿನಗಳಲ್ಲಿ ನಡೆದ ಘಟನಾವಳಿಗಳನ್ನು ಚಿತ್ರದ ಮೂ ಲಕ ನೋಡಿ ತಿಳಿದುಕೊಳ್ಳುಬಹುದು ಎಂದು ಹೇಳಿದರು.


ಸಮಾರಂಭದಲ್ಲಿ ಐ.ಜಿ.ರಸ್ತೆ ಶಾಖೆ ಮುಖ್ಯ ವ್ಯವಸ್ಥಾಪಕರಾದ ಬಾಲಕೃಷ್ಣ, ಕೆನರಾ ಬ್ಯಾಂಕ್ ಜಿಲ್ಲಾ ಮಾಹಿತಿ ವಿಭಾಗದ ವ್ಯವಸ್ಥಾಪಕರದ ಕೋಟಿಶ್ವರಿ ಹಾಗೂ ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.

Join Whatsapp
Exit mobile version