ಬಿಹಾರ ವಿಶ್ವಾಸಮತ ಯಾಚನೆಗೂ ಮುನ್ನ ಆರ್‌ಜೆಡಿ ನಾಯಕರ ಮನೆ ಮೇಲೆ ಸಿಬಿಐ ದಾಳಿ

Prasthutha|

ಪಾಟ್ನಾ: ಆರ್ ಜೆಡಿ ಬೆಂಬಲಿತ ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ್ ಸರ್ಕಾರವು ವಿಶ್ವಾಸಮತ ಯಾಚನೆಗೂ ಮುನ್ನ ಶಾಸಕರಿಗೆ ಸಿಬಿಐ ಷಾಕ್ ನೀಡಿದೆ.

- Advertisement -

‘ಉದ್ಯೋಗಕ್ಕಾಗಿ ಭೂಮಿ’ ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾದಳದ ನಾಯಕರ ನಿವಾಸಗಳ ಮೇಲೆ ಕೇಂದ್ರೀಯ ತನಿಖಾ ದಳ ಬುಧವಾರ ದಾಳಿ ನಡೆಸಿದೆ. ಲಾಲು ಕುಟುಂಬದ ಆಪ್ತ ಮತ್ತು ಆರ್‌ಜೆಡಿಯ ಎಂಎಲ್‌ಸಿ ಸುನಿಲ್ ಸಿಂಗ್ ಸೇರಿದಂತೆ ಆರ್‌ಜೆಡಿ ನಾಯಕರ ಹಲವು ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆದಿದೆ. ಆರ್‌ಜೆಡಿಯ ರಾಜ್ಯಸಭಾ ಸದಸ್ಯ ಅಶ್ಫಾಕ್ ಕರೀಂ ಅವರ ನಿವಾಸ,  ಆರ್‌ಜೆಡಿ ಸದಸ್ಯ ಫಯಾಜ್ ಅಹ್ಮದ್ ನಿವಾಸ ಮತ್ತು ಸುಬೋಧ್ ರಾಯ್ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ ನಡೆಸಲಾಗಿದೆ. 

 ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ. ಇದರಲ್ಲಿ ಯಾವ ಅರ್ಥವೂ ಇಲ್ಲ. ಪಕ್ಷದ ಶಾಸಕರನ್ನು ಬೆದರಿಸುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ಆರ್ ಜೆಡಿ  ಸಂಸದ ಮನೋಜ್ ಝಾ ಹೇಳಿದ್ದಾರೆ.

Join Whatsapp
Exit mobile version