ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ: ರಾಜಾ ಸಿಂಗ್ ಜಾಮೀನು ವಿರೋಧಿಸಿ ಹೈದರಾಬಾದ್ ನಲ್ಲಿ ಅಹೋರಾತ್ರಿ ಪ್ರತಿಭಟನೆ

Prasthutha|

ಹೈದರಾಬಾದ್: ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ರಾಜಾ ಸಿಂಗ್ ಜಾಮೀನು ವಿರೋಧಿಸಿ ಹೈದರಾಬಾದ್ ನಲ್ಲಿ ಜನರು ಮಂಗಳವಾರ ಅಹೋರಾತ್ರಿ ಪ್ರತಿಭಟನೆ ನಡೆಸಿದರು.

- Advertisement -

ರಾಜಾ ಸಿಂಗ್ ಅವರಿಗೆ ಜಾಮೀನು ನೀಡಿದ ನಂತರ ಮಂಗಳವಾರ ರಾತ್ರಿ ನೂರಾರು ಜನರು ಬೀದಿಗಿಳಿದಿದ್ದರಿಂದ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಪ್ರತಿಭಟನಾಕಾರರು ಐತಿಹಾಸಿಕ ಚಾರ್ಮಿನಾರ್, ಮದೀನಾ ವೃತ್ತ, ಬರ್ಕಾಸ್, ಚಂದ್ರಯಾನಗುಟ್ಟಾ, ಚಂಚಲಗುಡ, ಸಿಟಿ ಕಾಲೇಜು, ಅಫ್ಜಲ್ ಗುಂಜ್ ಮತ್ತು ಇತರ ಪ್ರದೇಶಗಳಲ್ಲಿ ಜಮಾಯಿಸಿ ಕಪ್ಪು ಬಾವುಟಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ರಾಜಾ ಸಿಂಗ್ ವಿರುದ್ಧ ಬುಧವಾರ ಮುಂಜಾನೆಯವರೆಗೂ ಪ್ರತಿಭಟನೆ ಮುಂದುವರಿಯಿತು.

- Advertisement -

ಒಂದೆರಡು ಸ್ಥಳಗಳಲ್ಲಿ, ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು,  ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಅಗತ್ಯವಿದ್ದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಕಳೆದ ರಾತ್ರಿ ಕೆಲವು ಪ್ರತಿಭಟನೆಗಳು ನಡೆದವು. ಆದರೆ ಈಗ ಪರಿಸ್ಥಿತಿ ಶಾಂತವಾಗಿದೆ ಎಂದು ಚಾರ್ ಮಿನಾರ್ ನ ಸಹಾಯಕ ಪೊಲೀಸ್ ಆಯುಕ್ತ ಜಿ.ಬಿಕ್ಷಮ್ ರೆಡ್ಡಿ ಬುಧವಾರ ತಿಳಿಸಿದ್ದಾರೆ.

Join Whatsapp
Exit mobile version