ನವದೆಹಲಿ: ಸೋಮವಾರ ತಡರಾತ್ರಿ ಆಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಭೂಕಂಪ ಸಂಭವಿಸಿದೆ. ದ್ವೀಪದ ಕ್ಯಾಂಪ್ ಬೆಲ್ ಕೊಲ್ಲಿಯಲ್ಲಿ ಭೂಮಿ ಕಂಪಿಸಿದ್ದು, ಈ ಬಗ್ಗೆ ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ ಮಾಹಿತಿ ನೀಡಿದೆ.
ಟ್ವೀಟ್ ಮೂಲಕ ಮಾಹಿತಿ ನೀಡಿರುವ ಭಾರತ ಸರ್ಕಾರದ ಭೂಕಂಪನ ಚಟುವಟಿಕೆಯ ಮೇಲ್ವಿಚಾರಣೆಯ ನೋಡಲ್ ಏಜೆನ್ಸಿ NCS, ಸೋಮವಾರ ಮಧ್ಯರಾತ್ರಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಕ್ಯಾಂಪ್ ಬೆಲ್ ಕೊಲ್ಲಿಯಲ್ಲಿ 1.11 AM ಸುಮಾರಿಗೆ ಕಂಪನ ಉಂಟಾಗಿದೆ. ಈಶಾನ್ಯ ಭಾಗದಿಂದ 85 ಕಿ.ಮೀ ದೂರದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ತಿಳಿಸಿದೆ.
ಭೂಕಂಪದ ಪ್ರಮಾನ ರಿಕ್ಟರ್ ಮಾಪಕದಲ್ಲಿ 4.4. ತೀವ್ರತೆ ದಾಖಲಾಗಿದೆ. ಕಂಪನದಿಂದ ತೀವ್ರ ಹಾನಿ ಸಂಭವಿಸಿಲ್ಲ. ಸುನಾಮಿ ಅಲರ್ಟ್ ನೀಡಲಾಗಿಲ್ಲ.