Home ಟಾಪ್ ಸುದ್ದಿಗಳು ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಅಭಿಯಾನಕ್ಕೆ ಬೊಮ್ಮಾಯಿ ಚಾಲನೆ

‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಅಭಿಯಾನಕ್ಕೆ ಬೊಮ್ಮಾಯಿ ಚಾಲನೆ

ದಾವಣಗೆರೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯಕಡೆ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಗ್ರಾಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.

 ಈ ವೇಳೆ ಮಾತನಾಡಿದ ಅವರು, ನಿಜವಾದ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿದ್ದು, ಸರ್ಕಾರ ವಿಧಾನ ಸೌಧದಲ್ಲಿದೆ ಎಂದು ನಾವು ಭಾವಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಸರ್ಕಾರ ಗ್ರಾಮೀಣ ಭಾಗಕ್ಕೆ ಬರಬೇಕು. ಈ ತತ್ವದಡಿ ಇಡೀ ಸರ್ಕಾರವನ್ನು ಜನರ ಮನೆ ಬಾಗಿಲಿಗೆ ತರಬೇಕೆಂಬ ಅಚಲ ನಿರ್ಧಾರ ನಮ್ಮದು. ಅಭಿವೃದ್ಧಿ ಜನರ ಸುತ್ತಲು ಆಗಬೇಕು.ಅಭಿವೃದ್ಧಿ ಸುತ್ತ ಜನ ಸುತ್ತಾಡಬಾರದು.ಜನರ ಬಳಿ ಅಭಿವೃದ್ಧಿ ಹೋದಾಗ ಸ್ಥಿರ ಬದುಕು ಸಿಗುತ್ತದೆ ಎಂದರು.

ಸಾಮಾಜಿಕ ಭದ್ರತೆ ಸೇವೆಗಳು ಗ್ರಾಮೀಣರ ಮನೆಗೆ ಬರಬೇಕು.ಜನವರಿ 26 ರಿಂದ ಎಲ್ಲಾ ಸೇವೆಗಳು ಗ್ರಾಮ ಪಂಚಾಯತಿಯಲ್ಲಿ ಸಿಗಬೇಕು. ಅಧಿಕಾರ ಹೆಪ್ಪುಗಟ್ಟಿ ವಿಧಾನಸೌಧದಲ್ಲಿ ಕೂರಬಾರದು. ಜೇನು ತುಪ್ಪದ ರೀತಿ ಗ್ರಾಮೀಣ ಭಾಗಕ್ಕೆ ಬರಬೇಕು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

Join Whatsapp
Exit mobile version