Home ಟಾಪ್ ಸುದ್ದಿಗಳು ವಿಪಕ್ಷಗಳ ಒಗ್ಗಟ್ಟು | 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ರಾಹುಲ್ ಗಾಂಧಿ

ವಿಪಕ್ಷಗಳ ಒಗ್ಗಟ್ಟು | 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ರಾಹುಲ್ ಗಾಂಧಿ

ಪಟ್ನಾ: ಪಟ್ನಾದಲ್ಲಿ ವಿಪಕ್ಷಗಳ ಒಗ್ಗಟ್ಟು ಪ್ರದರ್ಶನದಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 2024r ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.


ನಾವೆಲ್ಲರೂ ಜೊತೆಯಾಗಿ ಬಿಜೆಪಿಯನ್ನು ಸೋಲಿಸಲಿದ್ದೇವೆ. ಅದಕ್ಕಾಗಿಯೇ ಒಗ್ಗೂಡಲು ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.


ದೇಶದಲ್ಲಿ ಸಿದ್ಧಾಂತಗಳ ನಡುವೆ ಕದನ ನಡೆಯುತ್ತಿದೆ. ಒಂದೆಡೆ ಕಾಂಗ್ರೆಸ್ ನ ‘ಭಾರತ್ ಜೋಡೊ’ ಮತ್ತೊಂದೆಡೆ ಬಿಜೆಪಿ-ರ್ ಎಸ್ ಎಸ್ ನ ‘ಭಾರತ್ ತೋಡೊ’ (ಮುರಿಯುವ) ಸಿದ್ಧಾಂತ. ಬಿಹಾರದಲ್ಲಿ ಕಾಂಗ್ರೆಸ್ ಪಕ್ಷದ ಡಿಎನ್ ಎ ಇರುವುದರಿಂದ ಇಲ್ಲಿಗೆ ಬಂದಿದ್ದೇವೆ ಎಂದು ಪಾಟ್ನಾದಲ್ಲಿ ಹೇಳಿದ್ದಾರೆ.

Join Whatsapp
Exit mobile version