Home ಟಾಪ್ ಸುದ್ದಿಗಳು ಗೃಹ ಖಾತೆ ಕೆಲಸಗಳನ್ನು ಪರಮೇಶ್ವರ್ ಅವರು ಮರಿ ಖರ್ಗೆಗೆ ಲೀಸ್’ಗೆ ಕೊಟ್ಟಿದ್ದಾರೆ: ನಳಿನ್ ಕುಮಾರ್

ಗೃಹ ಖಾತೆ ಕೆಲಸಗಳನ್ನು ಪರಮೇಶ್ವರ್ ಅವರು ಮರಿ ಖರ್ಗೆಗೆ ಲೀಸ್’ಗೆ ಕೊಟ್ಟಿದ್ದಾರೆ: ನಳಿನ್ ಕುಮಾರ್

ಬೆಂಗಳೂರು: ಪರಮೇಶ್ವರ್ ಅವರು ಗೃಹ ಖಾತೆ ಕೆಲಸಗಳನ್ನು ಪ್ರಿಯಾಂಕ್ ಖರ್ಗೆಗೆ ಲೀಸ್’ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.


ರಾಜ್ಯ ಸರ್ಕಾರ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯವೈಖರಿ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ಪರಮೇಶ್ವರ ಅವರು ತಮ್ಮ ಗೃಹಖಾತೆಯ ಕೆಲಸಗಳನ್ನು ಪ್ರಿಯಾಂಕ್ ಖರ್ಗೆ ಲೀಸ್ ಗೆ ಕೊಟ್ಟಿದ್ದಾರೋ?, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಪೊಲೀಸ್ ಅಧಿಕಾರಿಗಳಿಗೆ ಮರಿ ಖರ್ಗೆಯವರು (ಪ್ರಿಯಾಂಕ್ ಖರ್ಗೆ) ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ ಎಂದರೆ ನನ್ನ ಊಹೆ ನಿಜ ಅಲ್ಲವೇ? ಎಂದು ಕಟೀಲ್ ಕಿಡಿಕಾರಿದ್ದಾರೆ.


‘ಪರಮೇಶ್ವರ, ಪ್ರಿಯಾಂಕ್ ಖರ್ಗೆ ಅವರೇ, ಪೊಲೀಸ್ ಅಧಿಕಾರಿಗಳನ್ನು ಕಂಟ್ರೋಲ್ ಮಾಡುವ ಕೆಲಸ ಬಿಟ್ಟು, ದನಕಳ್ಳರ ಮೇಲೆ ಕಠಿಣ ಕ್ರಮ ಕೈಗೊಳ್ಳಿ, ಅಕ್ರಮ ಕಸಾಯಿಖಾನೆಗಳ ಮೇಲೆ ಕ್ರಮ ಕೈಗೊಳ್ಳಿ, ಲವ್ ಜಿಹಾದ್ ಮಾಡುವವರ ಮೇಲೆ ಕ್ರಮ ಕೈಗೊಳ್ಳಿ, ಅಶಾಂತಿ ದೂತರ ಮೇಲೆ ಕ್ರಮ ಕೈಗೊಳ್ಳಿ. ಅದು ಬಿಟ್ಟು ಹಿಂದೂಪರ ಕಾರ್ಯಕರ್ತರ ಮೇಲೆ ಟಾರ್ಗೆಟ್ ಮಾಡೋದು ಬೇಡ’ ಎಂದು ಕಟೀಲ್ ಹೇಳಿದ್ದಾರೆ.

Join Whatsapp
Exit mobile version