Home ಟಾಪ್ ಸುದ್ದಿಗಳು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸದಿದ್ದರೆ ಭಾರತ ವಿಭಜನೆಯಾಗಬಹುದು: ಬರಾಕ್ ಒಬಾಮಾ ಎಚ್ಚರಿಕೆ

ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸದಿದ್ದರೆ ಭಾರತ ವಿಭಜನೆಯಾಗಬಹುದು: ಬರಾಕ್ ಒಬಾಮಾ ಎಚ್ಚರಿಕೆ

ನವದೆಹಲಿ: ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸದಿದ್ದರೆ ಭಾರತ ವಿಭಜನೆಯಾಗಲು ಪ್ರಾರಂಭಿಸಬಹುದು ಎಂದು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಶುಕ್ರವಾರ ಎಚ್ಚರಿಕೆ ನಿಡಿದ್ದಾರೆ.


ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿಯೇ ಒಬಾಮಾ ಈ ಹೇಳಿಕೆ ನೀಡಿದ್ದಾರೆ.


ಹವಾಮಾನ ಬದಲಾವಣೆ ಮತ್ತು ಇತರ ಕ್ಷೇತ್ರಗಳ ಬಗ್ಗೆ ಮೋದಿ ಅವರೊಂದಿಗೆ ಕೆಲಸ ಮಾಡಿದ್ದೇನೆ ಎಂದು ಒಬಾಮಾ ಒಪ್ಪಿಕೊಂಡರು. ಆದರೆ ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಕಳವಳ ವ್ಯಕ್ತಪಡಿಸಿ, ರಾಜತಾಂತ್ರಿಕ ಮಾತುಕತೆಗಳಿಗೆ ಪ್ರವೇಶಿಸಬೇಕು ಎಂದು ಒಬಾಮಾ ಪರೋಕ್ಷವಾಗಿ ಜೋ ಬೈಡನ್ ಅವರಿಗೆ ಹೇಳಿದರು.
ಅಮೆರಿಕದ ಅಧ್ಯಕ್ಷರು ಮೋದಿ ಅವರನ್ನು ಭೇಟಿಯಾದರೆ, ಬಹುಸಂಖ್ಯಾತ-ಹಿಂದೂ ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ತಿಳಿಹೇಳುವುದು ಉತ್ತಮ ಎಂದು ಒಬಾಮಾ ಹೇಳಿದರು.

Join Whatsapp
Exit mobile version