Home ಟಾಪ್ ಸುದ್ದಿಗಳು ‘ಫುಲೆ’ ಸಿನಿಮಾ ಬಿಡುಗಡೆಗೆ ಬಿಜೆಪಿ, RSS ಅಡ್ಡಿ: ರಾಹುಲ್ ಗಾಂಧಿ ಆರೋಪ

‘ಫುಲೆ’ ಸಿನಿಮಾ ಬಿಡುಗಡೆಗೆ ಬಿಜೆಪಿ, RSS ಅಡ್ಡಿ: ರಾಹುಲ್ ಗಾಂಧಿ ಆರೋಪ

0

ನವದೆಹಲಿ: ಜಾತಿ ತಾರತಮ್ಯ ಹಾಗೂ ಅನ್ಯಾಯದ ವಾಸ್ತವಾಂಶಗಳು ಮುನ್ನೆಲೆಗೆ ಬಾರದಂತೆ ಮಾಡಲು ಬಿಜೆಪಿ ಹಾಗೂ ಆರ್‌ಎಸ್ಎಸ್ ಪ್ರತಿ ಹಂತದಲ್ಲಿಯೂ ಸಂಚು ರೂಪಿಸುತ್ತಿವೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಎಂದು ಆರೋಪಿಸಿದ್ದಾರೆ. ‘ಫುಲೆ’ ಸಿನಿಮಾಗೆ ಈ ಸಂಘಟನೆಗಳು ಅಡ್ಡಿಪಡಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಆರ್‌ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಮಾಜ ಸುಧಾರಕ ಜ್ಯೋತಿರಾವ್ ಫುಲೆ ಮತ್ತು ಅವರ ಪತ್ನಿ ಸಾವಿತ್ರಿಬಾಯಿ ಫುಲೆ ಅವರ ಜೀವನಾಧಾರಿತ ಫುಲೆ ಸಿನಿಮಾ ಇಂದು ಬಿಡುಗಡೆಯಾಗಬೇಕಿತ್ತು. ಆದರೆ ಏಪ್ರಿಲ್ 25ಕ್ಕೆ ಮುಂದೂಡಲ್ಪಟ್ಟಿದೆ. ಸೆನ್ಸಾರ್ ವಿಷಯಕ್ಕೆ ಸಂಬಂಧಿಸಿದಂತೆ ಬಿಡುಗಡೆ ತಡವಾಗುತ್ತಿದೆ ಎಂದು ತಿಳಿದು ಬಂದಿದೆ.

ಫುಲೆ ಕುರಿತು ಎಕ್ಸ್ /ಟ್ವಿಟರ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ಬಿಜೆಪಿ ಹಾಗೂ ಆರ್‌ಎಸ್ಎಸ್ ನಾಯಕರು, ಫುಲೆ ಅವರಿಗೆ ಒಂದೆಡೆ ಮೇಲ್ನೋಟಕ್ಕೆ ಗೌರವ ಸಲ್ಲಿಸುತ್ತಾರೆ. ಮತ್ತೊಂದೆಡೆ, ಅವರ ಜೀವನಾಧಾರಿತ ಸಿನಿಮಾ ಬಿಡುಗಡೆಗೆ ಸೆನ್ಸಾರ್ ಮೂಲಕ ಅಡ್ಡಿಪಡಿಸುತ್ತಿದ್ದಾರೆ. ಮಹಾತ್ಮ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರು ತಮ್ಮ ಇಡೀ ಜೀವನವನ್ನು ಜಾತಿ ವ್ಯವಸ್ಥೆ ವಿರುದ್ಧದ ಹೋರಾಟಕ್ಕೆ ಮುಡಿಪಾಗಿಟ್ಟಿದ್ದರು. ಆದರೆ, ಈ ಐತಿಹಾಸಿಕ ಸಂಗತಿಗಳು ತೆರೆಯ ಮೇಲೆ ಬರಲು ಸಂಘ ಪರಿವಾರ ಕೃಪಾಪೋಷಿತ ಸರ್ಕಾರವು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್, ‘ಜಾತಿ ತಾರತಮ್ಯ ಹಾಗೂ ಅನ್ಯಾಯದ ನೈಜ ಅಂಶಗಳು ಮುನ್ನೆಲೆಗೆ ಬಾರದಂತೆ ಮಾಡುವ ಸಲುವಾಗಿ, ಪ್ರತಿ ಹಂತದಲ್ಲಿಯೂ ದಲಿತ–ಬಹುಜನರ ಇತಿಹಾಸವನ್ನು ಅಳಿಸಿಹಾಕಲು ಬಿಜೆಪಿ–ಆರ್‌ಎಸ್ಎಸ್ ಬಯಸುತ್ತವೆ’ ಎಂದು ಕಿಡಿಕಾರಿದ್ದಾರೆ.

ʼಸ್ಕ್ಯಾಮ್ -1992′ ಸಿನಿಮಾ ಖ್ಯಾತಿಯ ನಟ ಪ್ರತೀಕ್ ಗಾಂಧಿ ಹಾಗೂ ಪತ್ರಲೇಖಾ ಅವರು, ‘ಫುಲೆ’ ಚಿತ್ರದಲ್ಲಿ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಪಾತ್ರಗಳಲ್ಲಿ ನಟಿಸಿದ್ದಾರೆ.

ಬಿಡುಗಡೆ ದಿನಾಂಕ ಮುಂದೂಡಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ದೇಶಕ ಅನಂತ್ ಮಹಾದೇವನ್, ಬ್ರಾಹ್ಮಣ ಸುಮುದಾಯದವರಿಂದ ಆಕ್ಷೇಪಗಳು ಕೇಳಿಬಂದಿರುವ ಕಾರಣ ಚಿತ್ರ ಬಿಡುಗಡೆ ವಿಳಂಬವಾಗುತ್ತಿದೆ. ಸೆನ್ಸಾರ್ ಕಾರಣದಿಂದಾಗಿ ಅಲ್ಲ. ಸಿನಿಮಾ ಕುರಿತಂತೆ ಸೃಷ್ಟಿಯಾಗಿರುವ ವಿವಾದಗಳನ್ನು ಬಗೆಹರಿಸಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version