Home ಟಾಪ್ ಸುದ್ದಿಗಳು ಜನಸಂಖ್ಯಾ ಸ್ಫೋಟಕ್ಕೆ ಮುಸ್ಲಿಮರೇ ಕಾರಣ ಎಂದ ಬಿಜೆಪಿ ಶಾಸಕನಿಗೆ ಒಂಬತ್ತು ಮಕ್ಕಳು!

ಜನಸಂಖ್ಯಾ ಸ್ಫೋಟಕ್ಕೆ ಮುಸ್ಲಿಮರೇ ಕಾರಣ ಎಂದ ಬಿಜೆಪಿ ಶಾಸಕನಿಗೆ ಒಂಬತ್ತು ಮಕ್ಕಳು!

ಹೊಸದಿಲ್ಲಿ: ಜನಸಂಖ್ಯೆಯ ಹೆಚ್ಚಳಕ್ಕೆ ಮುಸ್ಲಿಮರೇ ಕಾರಣ ಎಂದು ಒಂಬತ್ತು ಮಕ್ಕಳಿರುವ ಮಧ್ಯಪ್ರದೇಶದ ಸಿಂಗಾರೌಲಿಯ ಬಿಜೆಪಿ ಶಾಸಕ ರಾಮ್ ಲಲ್ಲು ವೈಶ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಉತ್ತರಪ್ರದೇಶದ ಚುನಾವಣೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಜನಸಂಖ್ಯೆ ಸ್ಫೋಟಗೊಳ್ಳಲು ಮುಸ್ಲಿಮರೇ ಕಾರಣ ಎಂಬ ಕೋಮು ದ್ವೇಷದ ಪ್ರಚಾರವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ತೀವ್ರಗೊಳಿಸಿದ್ದಾರೆ.

ಉತ್ತರಪ್ರದೇಶ ಮತ್ತು ಅಸ್ಸಾಂ ನಂತರ ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶದಲ್ಲೂ ಜನಸಂಖ್ಯೆಯ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ವಿಪರ್ಯಾಸವೆಂದರೆ, ‘ನಾವಿಬ್ಬರು, ನಮಗಿಬ್ಬರು’ ಅಭಿಯಾನವನ್ನು ಮುನ್ನಡೆಸುತ್ತಿರುವ ಹೆಚ್ಚಿನ ಬಿಜೆಪಿ ನಾಯಕರು ಮೂರಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ.

ಈ ನಡುವೆ ಜನಸಂಖ್ಯೆಯ ಹೆಚ್ಚಳಕ್ಕೆ ಮುಸ್ಲಿಮರೇ ಕಾರಣ ಎಂದು ಒಂಬತ್ತು ಮಕ್ಕಳಿರುವ ಬಿಜೆಪಿ ಶಾಸಕ ಹೇಳಿಕೆ ನೀಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ‘ನಾವಿಬ್ಬರು, ನಮಗಿಬ್ಬರು’ ಎಂಬುದು ನಮ್ಮ ರಾಷ್ಟ್ರೀಯ ನೀತಿ. ಆದರೆ ಅದು ಯಶಸ್ವಿಯಾಗಿದೆಯೇ? ಮುಸ್ಲಿಮರು ಈ ನೀತಿಯನ್ನು ಅನುಸರಿಸುತ್ತಿಲ್ಲ. ಇದಕ್ಕೆ ಅನುಮತಿಸಬಾರದು ಎಂದು ಅವರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಭೋಪಾಲ್‌ನ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್, ಬಿಜೆಪಿಯ ಈ ಅಭಿಯಾನವು ಉತ್ತರಪ್ರದೇಶ ಚುನಾವಣೆಯನ್ನು ಗುರಿಯಾಗಿಸಿಕೊಂಡಿದೆಯೇ ಹೊರತು ಜನಸಂಖ್ಯೆ ನಿಯಂತ್ರಣ ಇವರ ಉದ್ದೇಶವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version