ಬೆಂಗಳೂರು: ಅಮ್ಯೂಸ್ ಮೆಂಟ್ ಪಾರ್ಕ್ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಶೀಘ್ರವೇ ವಂಡರ್ ಲಾ ಪಾರ್ಕ್ ತೆರೆಯಲಾಗುವುದು ಎಂದು ವಂಡರ್ ಲಾ ಹಾಲಿಡೇಸ್ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಅರುಣ್ ಕೆ ಚಿಟ್ಟಿಲಾಪಿಲ್ಲಿ ತಿಳಿದ್ದಾರೆ.
ಲಾಕ್ ಡೌನ್ ನಿಂದಾಗಿ ವಂಡರ್ ಲಾ ಪಾರ್ಕ್ ಅನ್ನು ಮುಚ್ಚಲಾಗಿತ್ತು. ಇದೀಗ ಸರ್ಕಾರ ತೆರೆಯಲು ಅವಕಾಶ ನೀಡಿದೆ. ವಂಡರ್ಲಾ ಪಾರ್ಕ್ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದು, ಕೋವಿಡ್ ನ ನಿಯಮಾವಳಿ ಪಾಲನೆ ಮಾಡಲಾಗುತ್ತದೆ. ಈಗಾಗಲೇ ಪೂರ್ಣ ಪಾರ್ಕ್ ಅನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಜನರ ಸುರಕ್ಷತೆಗೆ ಆಧ್ಯತೆ ನೀಡಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.