ಕಲಬುರಗಿ: “ಆರ್ಎಸ್ಎಸ್ನಲ್ಲಿನ ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ. ಕೊಳಕು ಮನಸ್ಸು, ಕೊಳಕು ಬುದ್ದಿ, ಕೊಳಕು ನಾಲಿಗೆ ಇವರದು” ಎಂದು ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಆರ್ಎಸ್ಎಸ್ ಬ್ಯಾನ್ ಮಾಡುತ್ತೇನೆ ಎಂದು ಹೇಳಿಲ್ಲ. ಮೂರು ಸಲ ಆರ್ಎಸ್ಎಸ್ ಬ್ಯಾನ್ ಆಗಿತ್ತು. ಆ ಬ್ಯಾನ್ ತೆಗೆದು ತಪ್ಪು ಮಾಡಿದೆವು ಎಂದು ಹೇಳಿದ್ದೇನೆ. ನಾವು ಅಧಿಕಾರಕ್ಕೆ ಬಂದರೆ ಬ್ಯಾನ್ ಮಾಡೋಣ ತಗೋಳಿ. ಅವರಿಗೆ ಜೈಲಿಗೆ ಹೋಗಲು ಯಾಕೆ ಅಷ್ಟು ಅವಸರ. RSS ಬ್ಯಾನ್ ಮಾಡಲು 10 ಕಾರಣ ಕೊಡಿ ಎಂದು ಬಿಜೆಪಿ ಅವರು ಕೇಳುತ್ತಾರೆ. ಆರ್ಎಸ್ಎಸ್ ಅವರು 100 ವರ್ಷದಲ್ಲಿ ದೇಶದ ಸಬಲೀಕರಣಕ್ಕಾಗಿ ಮಾಡಿದ 10 ಒಳ್ಳೆಯ ಕೆಲಸ ಹೇಳಲಿ” ಎಂದು ಟಕ್ಕರ್ ನೀಡಿದರು.
“ಆರ್ಎಸ್ಎಸ್ ಅವರಿಗೆ 300 – 400 ಕೋಟಿ ಹಣ ಎಲ್ಲಿಂದ ಬರುತ್ತಿದೆ ಎಂಬುದು ನನಗೆ ಗೊತ್ತು. ನಾವು ಯಾವಾಗ 3 ಫಿಗರ್ ಮಾರ್ಕ್ ಬರುತ್ತದೆ, ಆ ದಿನ ಐಟಿ, ಇಡಿ ಅವರನ್ನು ನಾನು ಅಲ್ಲಿಗೆ(RSS) ಬಳಿ ಕಳುಹಿಸುತ್ತೇನೆ. ಇದನ್ನು ಹೇಳುವುದಕ್ಕೆ ನಾನು ಹೆದರುವುದಿಲ್ಲ” ಎಂದರು.
