Home ಟಾಪ್ ಸುದ್ದಿಗಳು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಕುಳಿತ ಬಿಜೆಪಿ- ಜೆಡಿಎಸ್ ಶಾಸಕರು

ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಕುಳಿತ ಬಿಜೆಪಿ- ಜೆಡಿಎಸ್ ಶಾಸಕರು

ಬೆಂಗಳೂರು: ಸದನದಲ್ಲಿ ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡದ ಕಾರಣ ಬಿಜೆಪಿ ಮತ್ತು ಜೆಡಿಎಸ್​ ಸದಸ್ಯರು ವಿಧಾನಸಭೆಯೊಳಗೆ ಅಹೋರಾತ್ರಿ ಧರಣೆ ನಡೆಸಿದ್ದಾರೆ.

ವಿಧಾನಸಭೆ ಹಾಗೂ ವಿಧಾನಪರಿಷತ್​ನಲ್ಲಿ ವಿಪಕ್ಷ ನಾಯಕರು ಜಂಟಿಯಾಗಿ ಅಹೋರಾತ್ರಿ ಧರಣಿ ಕುಳಿತ್ತಿದ್ದು, ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗುತ್ತಾ ರಾಮನ ಭಜನೆ ಮಾಡಿದರು.

ಅಲ್ಲದೇ ಡಿಕೆ ಶಿವಕುಮಾರ್ ಅವರನ್ನು ನೋಡಿ ವಿಪಕ್ಷ ನಾಯಕ ಆರ್ ಅಶೋಕ್ ಅವರು, ನಿಮಗೆ ಬಹಳ ಖುಷಿ ಆಗುತ್ತಿದೆ ಅಲ್ವಾ? ಮುಖ ಶೈನಿಂಗ್ ನೋಡಿ, ಪಾರ್ಟಿ ಕೊಡಿಸಿ. ಹುಷಾರು ನಿಮಗೆ ಫೈಟ್ ಕೊಡಲು ಮತ್ತೊಬ್ಬರು ಬಂದಾರು ಎಂದು ಲೇವಡಿ ಮಾಡಿದರು. ಬಿಜೆಪಿ ಶಾಸಕರ ಈ ಮಾತು ಕೇಳಿಸಿಕೊಂಡು ಡಿಸಿಎಂ ಡಿಕೆ ಶಿವಕುಮಾರ್ ಮುಸಿ ಮುಸಿ ನಕ್ಕರು.

Join Whatsapp
Exit mobile version