Home ಟಾಪ್ ಸುದ್ದಿಗಳು ಅಮೆರಿಕ: ಇಸ್ರೇಲ್ ಪ್ರಧಾನಿ ತಂಗಿದ್ದ ಹೋಟೆಲ್‌‌ ಒಳಗೆ ಜಿರಳೆ, ಹುಳಗಳನ್ನು ಬಿಟ್ಟ ಪ್ರತಿಭಟನಕಾರರು

ಅಮೆರಿಕ: ಇಸ್ರೇಲ್ ಪ್ರಧಾನಿ ತಂಗಿದ್ದ ಹೋಟೆಲ್‌‌ ಒಳಗೆ ಜಿರಳೆ, ಹುಳಗಳನ್ನು ಬಿಟ್ಟ ಪ್ರತಿಭಟನಕಾರರು

ವಾಷಿಂಗ್ಟನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಭೇಟಿಗೆ ರಾಜಧಾನಿ ವಾಷಿಂಗ್ಟನ್‌ನಲ್ಲಿ ವಿರೋಧ ವ್ಯಕ್ತವಾಗಿದೆ. ಘೋಷಣೆಗಳನ್ನು ಕೂಗಿ, ಅವರು ತಂಗಿದ್ದ ಹೋಟೆಲ್‌‌ ಒಳಗಡೆ ಜಿರಳೆ, ಹುಳಗಳನ್ನು ಬಿಟ್ಟು ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾಕಾರರು ಬೆಂಜಮಿನ್ ನೆತನ್ಯಾಹು ವಾಸ್ತವ್ಯ ಹೂಡಿರುವ ವಾಟರ್‌ ಲಾಡ್ಜ್‌ ಹೋಟೆಲ್‌‌ ಒಳಗೆ ಜಿರಳೆ ಮತ್ತು ಹುಳಗಳನ್ನು ಬಿಟ್ಟು ಅವರ ಅಮೆರಿಕ ಭೇಟಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ರಾತ್ರಿಯಿಡೀ ಬೆಂಕಿ ಸೂಚಕ ಅಲರಾಂಗಳನ್ನು ಎಳೆದು ಅಡ್ಡಿಪಡಿಸಿದರು ಎಂದು ವರದಿಯಾಗಿದೆ.

ಬಳಿಕ ಸೆನೆಟ್ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ನೆತನ್ಯಾಹು ಭಾಷಣ ಮಾಡುವ ವಿರುದ್ಧ ಪ್ರತಿಭಟನಕಾರರು ಧರಣಿ ನಡೆಸಿದ್ದಾರೆ.

ಪ್ಯಾಲೆಸ್ತೀನ್ ಧ್ವಜಗಳನ್ನು ಬೀಸುತ್ತಾ ಪ್ರತಿಭಟನಕಾರರು, ಗಾಝಾದ ಜನರನ್ನು ಬದುಕಲು ಬಿಡಿ, ನೆತನ್ಯಾಹು ಅವರ ಬಂಧನವಗಲಿ ಎಂದು ಘೋಷಣೆ ಕೂಗಿದ್ದಾರೆ‌.

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಸ್ರೇಲ್‌ಗೆ ಮಿಲಿಟರಿ ಮತ್ತು ಆರ್ಥಿಕ ಬೆಂಬಲ ನೀಡುತ್ತಿರುವುದನ್ನು ವಿರೋಧಿಸಿಯೂ ಘೋಷಣೆ ಕೂಗಿದ್ದಾರೆ. ಪೊಲೀಸರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರನ್ನು ಬಂಧಿಸಿದ್ದಾರೆ.

ನೆತನ್ಯಾಹು ಭಾಷಣ ಮಾಡುವಾಗ ಪ್ರತಿಭಟನೆಗಳನ್ನು ತಡೆಯಲು, ಮುಂಜಾಗೃತ ಕ್ರಮವಾಗಿ ಕನಿಷ್ಠ 200 ಮಂದಿ ಪೊಲೀಸರನ್ನು ಸೆನೆಟ್ ಹೊರಗಡೆ ನಿಯೋಜಿಸಲಾಗಿತ್ತು. ಫೆನ್ಸಿಂಗ್ ಗಳನ್ನು ಹಾಕಿ ಪ್ರತಿಭಟನೆಯನ್ನು ತಡೆಯುವ ಪ್ರಯತ್ನ ಮಾಡಲಾಗಿತ್ತು.

ನೆತನ್ಯಾಹು ಭಾಷಣ ಮಾಡುವಾಗ ಪ್ರತಿಭಟನೆಗಳನ್ನು ತಡೆಯಲು, ಮುಂಜಾಗೃತ ಕ್ರಮವಾಗಿ ಕನಿಷ್ಠ 200 ಮಂದಿ ಪೊಲೀಸರನ್ನು ಸೆನೆಟ್ ಹೊರಗಡೆ ನಿಯೋಜಿಸಲಾಗಿದೆ. ಫೆನ್ಸಿಂಗ್ ಗಳನ್ನು ಹಾಕಿ ಪ್ರತಿಭಟನೆಯನ್ನು ತಡೆಯುವ ಪ್ರಯತ್ನ ಮಾಡಲಾಗಿದೆ.

Join Whatsapp
Exit mobile version